ಗ್ರಾಮಗಳ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿ : ಡಾ. ಬಸವರಾಜ ಕೇಲಗಾರ

ಗ್ರಾಮಗಳ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿ : ಡಾ. ಬಸವರಾಜ ಕೇಲಗಾರ

ರಾಣೇಬೆನ್ನೂರು, ಮಾ. 29- ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವ ಭಾರತ ದೇಶದ ಅಭಿವೃದ್ಧಿಯಾಗಬೇಕಿದ್ದರೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮೂಲಕ ಸಾಧ್ಯವೆಂದು ಆ ಮಂತ್ರದೊಂದಿಗೆ ಗ್ರಾಮೀಣ ಭಾಗದಲ್ಲಿ ಬಸ್ ಸಂಚರಿಸಲು ಹೊಸ ಮಾರ್ಗಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು  ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು. ಅವರು ರಾಣೇಬೆನ್ನೂರು ಬಸ್ ನಿಲ್ದಾಣದ ಬಳಿ ಹೊಸ ಮಾರ್ಗಗಳ ಎರಡು  ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದರು. ರಾಣೇಬೆನ್ನೂರಿನಿಂದ ಇಟಗಿ, ಲಿಂಗದಹಳ್ಳಿ, ಉಕ್ಕಡಗಾತ್ರಿ, ತುಮ್ಮಿನಕಟ್ಟಿ ಮಾರ್ಗವಾಗಿ ಹೊನ್ನಾಳಿಗೆ ಒಂದು, ಸ್ವಾತಂತ್ರ್ಯ ಗಳಿಸಿ ಮುಕ್ಕಾಲು ಶತಮಾನ ಕಳೆದರೂ ಬಸ್ ಕಾಣದ ನಲವಾಗಿಲು ಗ್ರಾಮಕ್ಕೆ ಮುದೇನೂರು, ಮಾಕನೂರು ಮಾರ್ಗವಾಗಿ ಚಲಿಸುವ ಬಸ್ ಗಳಿಗೆ ಡಾ. ಬಸವರಾಜ ಹಸಿರು ನಿಶಾನೆ ತೋರಿಸಿದರು. ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾರತಿ ಅಳವಂಡಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ,  ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೊಟ್ರೇಶ ಎಮ್ಮಿ, ಮುಖಂಡ ಇ.ಆರ್. ಕುಪ್ಪೇಲೂರ ಇತರರಿದ್ದರು.

error: Content is protected !!