ಪಾನ್‌ಗೆ ಆಧಾರ್ ಲಿಂಕ್ ಮಾಡಲು ನೀಡಿರುವ ಗಡುವು ವಿಸ್ತರಿಸಿ

ಮಾನ್ಯರೇ,

ಪಾನ್ ಗೆ ಆಧಾರ್ ಜೋಡಣೆ ಮಾಡಲು  ಇದೇ ತಿಂಗಳ  31ರ ಒಳಗೆ 1000  ರೂಪಾಯಿ ಶುಲ್ಕ ಪಾವತಿಸಿ ನವೀಕರಣಗೊಳಿಸಬೇಕು, ಇಲ್ಲದಿದ್ದರೆ  ನಿಷ್ಕ್ರಿಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ಗ್ರಾಮೀಣ ಭಾಗಗಳು  ಸೇರಿದಂತೆ ಬಹುತೇಕ ಮಂದಿಗೆ ಇಂದಿಗೂ ಕೂಡ ಈ ವಿಷಯದ ಬಗ್ಗೆ ಇನ್ನೂ  ಅರಿವೇ ಇಲ್ಲ. ಜಾಗೃತಿ ಮೂಡಿಸುವ ಅಗತ್ಯ ಇದೆ, ಮೊದಲೇ ಬೆಲೆ ಏರಿಕೆಯ ಬಿಸಿಯಿಂದ ಬಸವಳಿದಿರುವ ಜನತೆಗೆ 1000 ಶುಲ್ಕವು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿಜಕ್ಕೂ ಇದನ್ನು ಹಗಲು ದರೋಡೆ ಎಂದರೂ ತಪ್ಪಾಗಲಾರದು.

ಈ ಶುಲ್ಕವನ್ನು ಬೇಕಾದರೆ ತೆರಿಗೆ ಪಾವತಿದಾರರಿಗೆ ವಿಧಿಸಲಿ. ಆದರೆ,  ತೆರಿಗೆ  ಪಾವತಿದಾರರಲ್ಲದವರಿಗೂ ವಿಧಿಸುತ್ತಿರುವುದು ನಿಜಕ್ಕೂ ಮೂರ್ಖತನದ ಪರಮಾವಧಿ. ಕೇಂದ್ರ ಸರ್ಕಾರ ಪಾನ್ ಗೆ ಆಧಾರ್ ಲಿಂಕ್ ಮಾಡಲು ನೀಡಿರುವ ಗಡುವನ್ನು ಇನ್ನು ಆರು ತಿಂಗಳು ವಿಸ್ತರಿಸುವ ಜೊತೆಗೆ ಒಂದು ಸಾವಿರ ದಂಡ ಶುಲ್ಕದಿಂದ ವಿನಾಯಿತಿ ನೀಡಲಿ.


– ಮುರುಗೇಶ ಡಿ., ದಾವಣಗೆರೆ.

error: Content is protected !!