ಜಿಲ್ಲಾದ್ಯಂತ ಸಂಭ್ರಮದ ಯುಗಾದಿ

ಜಿಲ್ಲಾದ್ಯಂತ ಸಂಭ್ರಮದ ಯುಗಾದಿ

ದಾವಣಗೆರೆ, ಮಾ.23- ಯುಗಾದಿ ಹಬ್ಬವನ್ನು ಎರಡು ದಿನಗಳ ಕಾಲ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಗುರುವಾರ ಸಂಜೆ ಆಕಾಶದಲ್ಲಿ ಚಂದ್ರನನ್ನು ನೋಡಿ ಕಣ್ತುಂಬಿಕೊಂಡು, ಹಿರಿಯರು ಆಶೀರ್ವಾದ ಪಡೆದರು. ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಬಂದರು.

ಸಂಜೆಯಾಗುತ್ತಲೇ ಜನತೆ ಆಗಸದತ್ತ ಮುಖ ಮಾಡಿ ಕುತೂಹಲದಿಂದ ಚಂದ್ರ ನನ್ನು ಹುಡುಕುತ್ತಿದ್ದುದು ಕಂಡು ಬಂತು.  ಸಂಜೆ 6.30ರ ವೇಳೆಗೆ ಚಂದ್ರದರ್ಶನ ವಾಯಿತು. ಚಂದ್ರ ಕಾಣುತ್ತಿದ್ದಂತೆ ಜನರು ನಿಂತ ಜಾಗದಲ್ಲೇ ಭಕ್ತಿಯಿಂದ ನಮಸ್ಕಾರ ಮಾಡಿದರು. ಬಳಿಕ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. 

ಬುಧವಾರ ಮನೆಗಳು ಮಾವು-ಬೇವಿನ ತೋರಣಗಳಿಂದ ಸಿಂಗರಿಸಲ್ಪಟ್ಟಿ ದ್ದವು. ಎಣ್ಣೆ ನೀರಿನ ಸ್ನಾನ ಮಡಿ, ಹೊಸ ಬಟ್ಟೆಗಳನ್ನು ತೊಟ್ಟು, ಮನೆಯಲ್ಲಿ ಪೂಜೆ ಮಾಡಿ ಸ್ನೇಹಿತರು, ಸಂಬಂಧಿಕರಿಗೆ ಬೇವು-ಬೆಲ್ಲ ಹಂಚಿ ಪರಸ್ಪರ ಹೊಸ ವರ್ಷದ ಶುಭಾಶಯ ಕೋರಲಾಯಿತು. ಯುಗಾದಿ ಅಂಗವಾಗಿ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳು ನಡೆದವು.

error: Content is protected !!