ರಾಣೇಬೆನ್ನೂರು,ಮಾ.14- ಇಲ್ಲಿನ ದೇವಾಂಗ ಮಹಿಳಾ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸುಮಾ ಬಸವರಾಜ ಹಳ್ಳಿಯವರು ಅಧ್ಯಕ್ಷತೆ ವಹಿಸಿದ್ದರು.
ಡಾ.ಲತಾ ಬಸವರಾಜ ಕೇಲಗಾರ ಕಾರ್ಯಕ್ರಮ ಉದ್ಘಾಟಿಸಿದರು. ಶಾರದಾ ಚಂದ್ರಪ್ಪ ಆನ್ವೇರಿ, ಕವಿತಾ ಹೆದ್ದೇರಿ, ಭಾಗ್ಯಶ್ರೀ ಮಂಜುನಾಥ ಕುಸಗೂರ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಶ್ರೀಮತಿ ಲಕ್ಷ್ಮಿ ಅಡಕೆ, ಜಯಶ್ರೀ ಹೆದ್ದೇರಿ, ಜಯಶ್ರೀ ಕುಂಚೂರ, ಸುಷ್ಮಾ ಮಂಡಕ್ಕಿ, ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕತರಾದ ಶಿಕ್ಷಕಿ ಉಮಾ ಅಗಡಿ ಇವರನ್ನು ಸನ್ಮಾನಿಸಲಾಯಿತು.
ಸವಿತಾ ದುರ್ಗದಶೀಮಿ ಮತ್ತು ಸಂಗಡಿಗರು ಪ್ರಾರ್ಥನೆ ಮಾಡಿದರು. ಸರೋಜಾ ಉದಗಟ್ಟಿ ನಿರೂಪಿಸಿದರು. ಶ್ರೀದೇವಿ ಬೆಟಗೇರಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಅನುರಾಧ ಗಿರಿಧರ ಗುಳೇದಗುಡ್ಡ ವಂದಿಸಿದರು.
ಸುಷ್ಮಾ ಮಂಡಕ್ಕಿ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಸೌಮ್ಯ ಹರಿಹರ, ಅಮೃತ ಹಳ್ಳಿ, ಕವಿತಾ ಮೈಲಾರದ ಜ್ಯೋತಿ ಲಕ್ಷ್ಮೇಶ್ವರ, ಸಂಕಪ್ಪ ಮಾರನಾಳ, ಕರಬಸಪ್ಪ ನೀಲಗುಂದ, ಅಶೋಕ ದುರ್ಗದಶೀಮಿ, ಗಣೇಶ ಹಾವನೂರ, ವಿಷ್ಣು ಗುಡಿಸಾಗರ, ಗಣೇಶ ಸಾಲಗೇರಿ, ಬಸವರಾಜ ಲಕ್ಷ್ಮೇಶ್ವರ, ಇನ್ನಿತರರು ಉಪಸ್ಥಿತರಿದ್ದರು.