ಮಲೇಬೆನ್ನೂರು, ಮಾ.14- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಿರುವ 10 ಡೆಸ್ಕ್ಗಳನ್ನು ಮಂಗಳವಾರ ಯೋಜನೆಯ ಮಲೇಬೆ ನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಹಸ್ತಾಂತರ ಮಾಡಿದರು.
10 ಡೆಸ್ಕ್ಗಳನ್ನು ಜಿಗಳಿ, ಯಲವಟ್ಟಿ, ಜಿ.ಬೇವಿನಹಳ್ಳಿ ಸೇರಿದಂತೆ ಮಲೇಬೆನ್ನೂರು ಯೋಜನಾಧಿಕಾರಿ ಕಛೇರಿ ವ್ಯಾಪ್ತಿಯ 8 ಶಾಲೆಗಳಿಗೆ ತಲಾ 10 ಡೆಸ್ಕ್ಗಳಂತೆ ನೀಡಿದ್ದೇವೆ ಎಂದು ವಸಂತ್ ದೇವಾಡಿಗ ತಿಳಿಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿದರು. ಗ್ರಾಮದ ಜಿ.ಎಂ. ಆನಂದಪ್ಪ, ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್, ಪತ್ರಕರ್ತ ಪ್ರಕಾಶ್, ಜಿಗಳಿ ವಲಯದ ಮೇಲ್ವಿಚಾರಕಿ ಪದ್ಮಾವತಿ, ಸೇವಾ ಪ್ರತಿನಿಧಿಗಳಾದ ನಾಗರತ್ನ, ಮಮತಾ, ಎಸ್ಡಿಎಂಸಿ ಅಧ್ಯಕ್ಷ ಬಿ. ಪ್ರಭಾಕರ್, ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಸುನೀತಾ, ಮಂಜುಳಾ, ರತ್ನಮ್ಮ, ಗಂಗಾಧರಾಚಾರಿ, ಟಿ. ನಾಗರಾಜ್, ವಿಜಯಭಾಸ್ಕರ್, ವಿ.ಡಿ. ಕೃಷ್ಣಕುಮಾರ್, ಶಿಕ್ಷಕರಾದ ನಾಗೇಶ್, ಲಿಂಗರಾಜ್, ಮಲ್ಲಿಕಾರ್ಜುನ್, ಗುಡ್ಡಪ್ಪ, ಲೋಕೇಶ್, ಶ್ರೀನಿವಾಸ್ ರೆಡ್ಡಿ, ಜಯಶ್ರೀ, ದೀಪಾ, ಕುಸುಮ, ವೀಣಾ ಹಾಗೂ ಇತರರು ಈ ವೇಳೆ ಹಾಜರಿದ್ದರು.