ಹೊನ್ನಾಳಿ, ಮಾ. 10- ಇಲ್ಲಿನ ಖಾಸಗಿ ಬಸ್ ನಿಲ್ದಾಣಕ್ಕೆ ಸಮೀಪದ ಪಟ್ಟಣಶೆಟ್ಟಿ ಫೀಲ್ಡ್‍ನಲ್ಲಿ ಪ್ರಜಾಧ್ವನಿ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ಬೃಹತ್ ವೇದಿಕೆಯನ್ನು ಮುಖಂಡ ಡಿ.ಎಸ್. ಪ್ರದೀಪ್‌ಗೌಡ ಪರಿಶೀಲಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಬಿ. ಝಡ್. ಜಮೀರ್ ಅಹಮ್ಮದ್ ಖಾನ್, ಜಯಕುಮಾರ್, ಬಸವರಾಜ ರಾಯರೆಡ್ಡಿ, ಪಿ.ಟಿ. ಪರಮೇಶ್ವರ್‍ನಾಯ್ಕ, ಮಧು ಬಂಗಾರಪ್ಪ ಇತರರು ಭಾಗವಹಿಸಲಿದ್ದಾರೆ.
ಸುಸಜ್ಜಿತ ವೇದಿಕೆ, ಅಚ್ಚುಕಟ್ಟಾದ ಭೋಜನ ವ್ಯವಸ್ಥೆಗೆ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ತಿಳಿಸಿದರು. ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ರವೀಶ್ ನೇತೃತ್ವದಲ್ಲಿ ಈಗಾಗಲೇ ನಾನಾ ಸಭೆಗಳು ನಡೆದಿವೆ.