ಜಗಳೂರು, ಮಾ.8- ತಾಲೂಕಿನ ತೋರ ಣಗಟ್ಟೆ ಗ್ರಾಮದಲ್ಲಿ ಬಲಿಜಿಗ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಮಾತನಾಡಿ, ದ್ವಾಪರ ಯುಗದಲ್ಲಿ ಸಮಾಜದ ಬದಲಾವಣೆಗೆ ಶ್ರಮಿಸಿದ ಕಾಲಜ್ಞಾನಿ ಕೈವಾರ ತಾತಯ್ಯ ಅವರ ಕೊಡುಗೆ ಅಪಾರವಾಗಿದೆ. ದಾರ್ಶನಿಕರ ತತ್ವಾದರ್ಶಗಳನ್ನು ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್ ಮಾತನಾಡಿ, ಲೌಕಿಕತೆ ತೊರೆದು ಅಧ್ಯಾ ತ್ಮಿಕತೆಯ ಜಗತ್ತನ್ನು ಪರಿಚಯಿಸಿದ ಯೋಗಿ ನಾರಾಯಣ ಕೈವಾರ ತಾತಯ್ಯ ನಮಗೆ ಆದ ರ್ಶವಾಗಿದ್ದಾರೆ. ಅವರ ಜಯಂತಿಯನ್ನು ಮುಂ ದಿನ ದಿನಗಳಲ್ಲಿ ಅದ್ಧೂರಿಯಾಗಿ, ಪಕ್ಷಾತೀತ ವಾಗಿ ಆಚರಿಸೋಣ ಎಂದು ಕರೆ ನೀಡಿದರು.
ಮೂರು ಶತಮಾನಗಳ ಹಿಂದೆ ಕಾಲಜ್ಞಾನಿ ನುಡಿದಂತೆ ಕತ್ತಿ ಗುರಾಣಿಗಳಿಲ್ಲದೆ, ಯುದ್ದ ತಂತ್ರಗಳನ್ನು ಅರಿಯದ ರಾಜಕಾರಣಿಗಳು ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿರುವುದು ಸತ್ಯ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ್, ಜಯ ಕುಮಾರ್, ಲೋಕೇಶ್, ರಾಮಾಂಜನೇಯ, ಬಿ.ಭೀಮಣ್ಣ, ದತ್ತಾತ್ರೇಯ, ರುದ್ರಮುನಿ, ಶ್ರೀನಿವಾಸ್ ಮುಂತಾದವರು ಇದ್ದರು.