ಹರಿಹರ, ಮಾ. 5 – ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಹೆಚ್ಚಿಸಿದ್ದರ ವಿರುದ್ಧ ಶಾಸಕ ಎಸ್. ರಾಮಪ್ಪ ನೇತೃತ್ವದಲ್ಲಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಹಶೀಲ್ದಾರ್ ಶಶಿಧರಯ್ಯನವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ರಾಮಪ್ಪ, ಬಿಜೆಪಿ ಸರ್ಕಾರವು ಅಡುಗೆ ಅನಿಲ ಹಾಗೂ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚು ಮಾಡುತ್ತಿರುವುದರಿಂದ ಜನ ಸಾಮಾನ್ಯರು ಬದುಕನ್ನು ಕಟ್ಟಿಕೊಳ್ಳುವುದು ದುಸ್ತರವಾ ಗುತ್ತಿದೆ. ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಅನಿಲ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಎಸ್.ಎಂ. ವಸಂತ್, ಅಬ್ದುಲ್ ಅಲಿಂ, ನಗರಸಭೆ ಮಾಜಿ ಸದಸ್ಯರಾದ ಬಿ.ಕೆ. ಸೈಯದ್ ರೆಹಮಾನ್, ಏಜಾಜ್ ಆಹ್ಮದ್, ಮುಖಂಡರಾದ ಸುರೇಶ್ ಹಾದಿಮನಿ, ಮಹಮ್ಮದ್ ಫೈರೋಜ್, ಭಾಗ್ಯಮ್ಮ,ನೇತ್ರಾವತಿ, ವಿದ್ಯಾ, ಕೆ.ಪಿ. ಗಂಗಾಧರ ಮಲೇಬೆನ್ನೂರು, ಹಬೀಬ್, ಹನುಮಂತಪ್ಪ, ಅಬಿದಾಲಿ ಮತ್ತಿತರರು ಹಾಜರಿದ್ದರು.