ಮಲೇಬೆನ್ನೂರು, ಮಾ. 5 – ಜಿಗಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಅಂಗವಾಗಿ ಸ್ವಾಮಿಯ ಉಚ್ಛಾಯ ಭಾನುವಾರ ಬೆಳಗ್ಗೆ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸಂಜೆ ಶಸ್ತ್ರ ಕಾರ್ಯಕ್ರಮಗಳು ನಡೆದವು.
ಇದೇ ದಿನ ತಡರಾತ್ರಿ (ಸೋಮವಾರ ಬೆಳಗಿನ ಜಾವ) ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಶ್ರೀ ಬೀರಲಿಂಗೇಶ್ವರ ಸ್ವಾಮಿ, ಜಿ. ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ, ಯಲವಟ್ಟಿಯ ಶ್ರೀ ಆಂಜನೇಯ ಸ್ವಾಮಿ ಒಡಗೂಡಿ ಸಕಲ ಬಿರುದಾವಳಿಗಳಿಂದ ಬ್ರಾಹ್ಮೀ ಮುಹೂರ್ತದಲ್ಲಿ ಜರುಗಿತು.
ನಾಳೆ ಸೋಮವಾರ ಬೆಳಿಗ್ಗೆ 10.30 ರಿಂದ ಜವಳ, ಮುದ್ರೆ ಮತ್ತು ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಗುವುದು.
ದಿನಾಂಕ 7 ರ ಮಂಗಳವಾರ ವಿವಿಧ ಕಾರ್ಯಕ್ರಮಗಳ ನಂತರ ಸಂಜೆ 7.30 ರಿಂದ ಶ್ರೀ ರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಜಿ. ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಭೂತನ ಸೇವೆ ನಡೆಯುವುದು ಮತ್ತು ರಾಜಬೀದಿಗಳಲ್ಲಿ ವಿವಿಧ ವಾದ್ಯಗಳೊಂದಿಗೆ ಉತ್ಸವ ನಡೆಯಲಿದೆ. ದಿನಾಂಕ 10 ರ ಶುಕ್ರವಾರ ಚೌಡಮ್ಮ ದೇವಿಯ ಹಬ್ಬವಿರುತ್ತದೆ. ಅನ್ನ ಸಂತರ್ಪಣೆ : ರಥೋತ್ಸವ ಪ್ರಯುಕ್ತ ನಾಳೆ ಸೋಮ ವಾರ ಇಡೀ ದಿನ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪ್ರಮುಖರಾದ ಗೌಡ್ರ ಬಸವರಾಜಪ್ಪ ತಿಳಿಸಿದ್ದಾರೆ.