ಹರಿಹರ : ನೌಕರರಿಂದ ಮುಷ್ಕರ

ಹರಿಹರ : ನೌಕರರಿಂದ ಮುಷ್ಕರ

ಹರಿಹರ, ಮಾ. 1 – ನಗರದಲ್ಲಿ ಸರ್ಕಾರಿ ನೌಕರರು ತಮ್ಮ ಬೇಡಿಕೆಗಾಗಿ ಆಗ್ರಹಿಸಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರ ಮಾಡಿದರು. 

 ತಹಶೀಲ್ದಾರ್ ಕಚೇರಿ, ನೋಂದಣಿ ಕಚೇರಿ, ಬೆಸ್ಕಾಂ ಕಚೇರಿ, ಆರೋಗ್ಯ ಇಲಾಖೆ, ತಾಪಂ ಇಲಾಖೆ, ಸರ್ವೆ ಇಲಾಖೆ, ಆಹಾರ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ತಾಲ್ಲೂಕಿನ ಬಹುತೇಕ ಇಲಾಖೆಯ ಸಿಬ್ಬಂದಿಗಳು ಕಚೇರಿಗಳಿಗೆ ಬೀಗವನ್ನು ಹಾಕಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮತ್ತು ಶಾಲೆ – ಕಾಲೇಜು ಬಂದ್ ಮಾಡಿ ಶಾಂತಿಯುತ ಮುಷ್ಕರ ಮಾಡಿದರು. 

ಸರ್ಕಾರಿ ನೌಕರರ ಮುಷ್ಕರ ದಿಂದ ಸಾರ್ವಜನಿಕರಿಗೆ ತೊಂದರೆಗಳು ಆಗದಂತೆ ಬಸ್ ಸಂಚಾರ, ನೀರು ಸರಬರಾಜು, ವಿದ್ಯುತ್ ಪೂರೈಕೆ, ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ತುರ್ತು ವೈದ್ಯಕೀಯ ಸೇವೆ, ಗರ್ಭಿಣಿಯರಿಗೆ ಹೆರಿಗೆ ಕೇಂದ್ರದಲ್ಲಿ ಚಿಕಿತ್ಸೆ, ಸೇರಿದಂತೆ ಇತರೆ ಸೌಲಭ್ಯಗಳು ಎಂದಿನಂತೆ ನಡೆದವು. 

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್ ಮಾತನಾಡಿ, ತಾಲ್ಲೂಕಿನ 3 ಸಾವಿರ ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಶೇ.17ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹಾಗೂ ಹಳೆಯ ಪಿಂಚಣಿ ಪದ್ಧತಿ ಜಾರಿಗೆ ವರದಿ ಪಡೆಯುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇದು ನಮಗೆ ಅಷ್ಟೊಂದು ತೃಪ್ತಿದಾಯಕವಲ್ಲವಾದರೂ, ರಾಜ್ಯ ಸಂಘದ ಸೂಚನೆಯಂತೆ ಹೋರಾಟದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರಾದ ಅಂಗಡಿ ರೇವಣಸಿದ್ದಪ್ಪ, ಶರಣ್ ಕುಮಾರ್ ಹೆಗಡೆ, ಎಂ. ಉಮ್ಮಣ್ಣ, ಡಿ.ಟಿ. ಮಂಜುನಾಥ್, ಶಿವಮೂರ್ತಿ, ಶಿವಕುಮಾರ, ವಿಜಯ ಮಹಾಂತೇಶ್, ಡಾ ಹನುಮನಾಯ್ಕ್, ತಿಪ್ಪಣ್ಣರಾಜ್, ವಿ.ಬಿ. ಕೊಟ್ರೇಶ್, ರೂಪಾ, ರಾಧಾ, ಅಂಗಡಿ ಮಲ್ಲಿಕಾರ್ಜುನ, ಡಾ ನಾಗರಾಜ್, ಈಶಪ್ಪ ಬೂದಿಹಾಳ, ಸಿಡಿಪಿಓ ನಿರ್ಮಲ, ಪ್ರಕಾಶ್, ಆಶ್ರಪ್ ಅಲಿ, ಅರವಿಂದ್, ಎನ್.ಪಿ.ಎಸ್. ಮುಖಂಡ ಸಂಗಣ್ಣ ಕರಡಿ, ಪೂಜಾ, ಲಿಂಗಾರಾಜ್ ಮತ್ತಿತರರು ಹಾಜರಿದ್ದರು.  

error: Content is protected !!