ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ನೌಕರರ ಮುಷ್ಕರ

ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ನೌಕರರ ಮುಷ್ಕರ

ಮಲೇಬೆನ್ನೂರು, ಫೆ. 28 –  ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 1 ರಿಂದ  ಸರ್ಕಾರಿ ಕಚೇರಿಗಳಿಗೆ ಶಾಲಾ-ಕಾಲೇಜುಗಳಿಗೆ ಗೈರು ಹಾಜರಾಗುವುದರ ಮೂಲಕ ಅನಿರ್ದಿಷ್ಟ ಅವಧಿ ಮುಷ್ಕರವನ್ನು ಮಾಡೋಣವೆಂದು ಸರ್ಕಾರಿ ನೌಕರರ ಸಂಘದ ಹರಿಹರ ತಾ, ಅಧ್ಯಕ್ಷ ಎ ಕೆ ಭೂಮೇಶ್ ಕರೆ ನೀಡಿದರು.

ಅವರು ಸೋಮವಾರ ಪಟ್ಟಣದ  ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಎಲ್ಲಾ ನೌಕರರು ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸೋಣ ನಮ್ಮ ಭವಿಷ್ಯದ ಬದುಕಿಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗೋಣ ಎಂದು ತಿಳಿಸಿದರು. 

ನೌಕರರ ಸಂಘದ ಗೌರವಾಧ್ಯಕ್ಷ ವಿಜಯ ಮಹಾಂತೇಶ್,  ಕಾರ್ಯದರ್ಶಿ ಎಂ.ಬಿ. ಮಂಜುನಾಥ್, ಉಪಾಧ್ಯಕ್ಷರಾದ ವೈ.ಪಿ. ಸಾಕಮ್ಮ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಹೆಚ್. ಶಿವಕುಮಾರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸಿ. ಜಯಣ್ಣ, ಉಪ ಪ್ರಾಂಶುಪಾಲ ಜಗದೀಶ್ ಉಜ್ಜಮ್ಮನವರ್, ಶಿಕ್ಷಕರಾದ ರೇವಣಸಿದ್ದಪ್ಪ ಅಂಗಡಿ, ರಾಮಪ್ಪ ಸೋಮಣ್ಣನವರ್,  ಮುಂತಾದವರಿದ್ದರು.

error: Content is protected !!