ಲಕ್ಕಶೆಟ್ಟಿಹಳ್ಳಿ ಗ್ರಾಮದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್
ಹರಿಹರ, ಫೆ 23 – ಮಡಿವಾಳ ಸಮಾಜ ಬಾಂಧವರು ಸಂಘಟಿತರಾದಲ್ಲಿ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಹೇಳಿದರು.
ತಾಲ್ಲೂಕಿನ ಲಕ್ಕಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ವೀರಗಂಟಿ ಮಡಿವಾಳ ಮಾಚಿದೇವರ ಜಯಂತಿ ಹಾಗೂ ಊರ ಮಧ್ಯದಲ್ಲಿ ನಿರ್ಮಿಸಿ ರುವ ಮಡಿವಾಳ ಮಾಚಿದೇವ ಸರ್ಕಲ್ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಲಕ್ಕಶೆಟ್ಟಿ ಹಳ್ಳಿ ಅಭಿವೃದ್ಧಿಗಾಗಿ 8 ಕೋಟಿ 29 ಲಕ್ಷ ಅನುದಾನವನ್ನು ನೀಡಿದ್ದೇನೆ. ಮತ್ತೆ ನಾನು ಶಾಸಕನಾದಲ್ಲಿ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸು ತ್ತೇನೆ ಎಂದರು. ಜೆಡಿಎಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಪರಮೇಶ್ವರಗೌಡ್ರು, ಜೆಡಿಎಸ್ ಹಿಂದುಳಿದ ವರ್ಗಗಳ ಸಂಘಟನಾ ಕಾರ್ಯದರ್ಶಿ ಎಂ.ಎಸ್ ಕಾಳಪ್ಪ, ಎಸ್.ಟಿ ಸಮಾಜದ ತಾಲ್ಲೂಕು ಅಧ್ಯಕ್ಷ ಜಿಗಳಿ ರಂಗಣ್ಣ, ಸಾರಥಿ ಮುನೀಂದ್ರ, ಹನಗೊಡ್ರ ಬಸಪ್ಪ, ಮಾಷ್ಠಿ ಹನುಮಂತಪ್ಪ, ನಾಗಸನಹಳ್ಳಿ ಸುರೇಶ, ಸ್ವಾಮಿ ಮಹಾಲಿಂಗಯ್ಯ, ಕೆಪ್ಪರ್ ನಾಗಪ್ಪ, ರೇವಣಸಿದ್ದಪ್ಪ, ನಿಂಗರಾಜ್ ಕೆ.ಕೆ, ಪತ್ರಕರ್ತ ಲೋಕಿಕೆರೆ ಅಣ್ಣಪ್ಪ, ಬಿಳಸನೂರು ಚಂದ್ರಪ್ಪ, ತಳವಾರ ಅಜ್ಜಗಪ್ಪ, ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.