ಮಲೇಬೆನ್ನೂರು: 64 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ

ಮಲೇಬೆನ್ನೂರು: 64 ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆ

ಮಲೇಬೆನ್ನೂರು, ಫೆ. 15-  ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹರಿಹರ ತಾಲ್ಲೂಕಿನಲ್ಲಿ ನಿಯಮಿತವಾಗಿ ಕೈಗೊಂಡ ಆರೋಗ್ಯ ತಪಾಸಣೆಯಲ್ಲಿ 64 ಶಾಲಾ ಮಕ್ಕಳು ಹೃದಯ ಸಂಬಂಧಿ ಕಾಯಿಲೆ ಪೀಡಿತರಾಗಿರು ವುದು ಕಂಡು ಬಂದಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಹಾಗೂ ಹರಿಹರ ತಾಲ್ಲೂಕು ನೋಡಲ್ ಅಧಿಕಾರಿ ಡಾ. ನಟರಾಜ್ ತಿಳಿಸಿದರು.

ಹನಗವಾಡಿಯ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಜನ್ಮಜಾತ ಹೃದಯ ದೋಷ ಜಾಗೃತ ದಿನಾಚರ ಣೆಯಲ್ಲಿ ಭಾಗ ವಹಿಸಿ ಅವರು  ಮಾತನಾಡಿದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿ (ಆರ್‌ಬಿಎಸ್‌ಕೆ) ಆರೋಗ್ಯ ತಪಾಸಣೆ ನಡೆಸಲಾಗಿತ್ತು. 64 ಕಾಯಿಲೆ ಪೀಡಿತರ ಪೈಕಿ 6 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಉಳಿದ ಮಕ್ಕಳನ್ನು ಔಷಧ ನೀಡುವ ಮೂಲಕ ಗುಣ ಪಡಿಸಲಾಗಿದೆ. ಹುಟ್ಟಿನಿಂದಲೇ ಕೆಲವು ಕಾಯಿಲೆ ಗಳು ಮಕ್ಕಳಲ್ಲಿ ಇರಬಹುದು. ಅದನ್ನು ಬಾಲ್ಯಾ ವಸ್ಥೆಯಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಿದರೆ ಮುಂದಿನ ಸಮಸ್ಯೆಗಳಿಂದ ಪಾರಾಗಲು ಹಾಗೂ ಆರೋಗ್ಯವಂತರಾಗಲು ಸಾಧ್ಯ ಎಂದು ಹೇಳಿದರು.

ಚಿತ್ರದುರ್ಗದ ಡಿಜಿಟಲ್ ಹೆಲ್ತ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ರಿಸರ್ಚ್ ಅಂಡ್ ಟ್ರೈನಿಂಗ್‌ ಸೆಂಟರ್‌ನ ಡಾ. ಪಿ.ಎಸ್ ಬಾಲು ಮಾತನಾಡಿ ನಮ್ಮ ಸಂಸ್ಥೆಯಿಂದ ತಾಲ್ಲೂಕು ಆರೋಗ್ಯ ಇಲಾಖೆಯ ಆರ್‌ಬಿಎಸ್‌ಕೆಯ ಎರಡು ತಂಡ ಗಳಿಗೆ ಎರಡು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ (ಎಐ) ಸ್ಟೆತೋಸ್ಕೋಪ್ ಕೊಡುಗೆಯಾಗಿ ನೀಡಲಾಗಿದೆ. ಈ ಮೂಲಕ ಶಾಲಾ ಮಕ್ಕಳ ಹೃದಯ ತಪಾಸಣೆಯನ್ನು ಸುಲಭ ಹಾಗೂ ನಿಖರವಾಗಿ ಮಾಡಲು ಸಹಾಯಕ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಕಾಯಿಲೆ ಪೀಡಿತ ಮಕ್ಕಳ ಚಿಕಿತ್ಸೆಗೆ ಆರ್‌ಬಿ ಎಸ್‌ಕೆ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.

ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್, ವೈದ್ಯಾಧಿಕಾರಿಗಳಾದ ಡಾ. ಶಿಲ್ಪ, ಡಾ. ವಿಶ್ವನಾಥ್, ಡಾ. ಮಹ್ಮದ್ ಅಲಿ, ಡಾ.ಮಮತಾ, ಡಾ. ಗಿರಿಜಾ, ತಾ ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿ ಎಂ.ಉಮ್ಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ. ನಾಗರಾಜ್, ಗ್ರಾ.ಪಂ. ಉಪಾಧ್ಯಕ್ಷ ಎಸ್ ಎಂ ರೇವಣಸಿದ್ದಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

error: Content is protected !!