ಹೊನ್ನಾಳಿ, ಫೆ. 12- ನೂರಾರು ಕಿಲೋ ಮೀಟರ್ ನಡೆಗೆ ಮೂಲಕ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜಯಂತ್ಯುತ್ಸವಕ್ಕೆ ಬರುವ ಪಾದಯಾತ್ರಿ ಮಾಲಾಧಾರಿಗಳು ಅಧಿಕ ಬಿಸಿಲು ಇರುವುದರಿಂದ ಅಲ್ಲಲ್ಲಿ ವಿಶ್ರಾಂತಿ ಪಡೆದು ತೆರಳುವಂತೆ ಹೆಲ್ಪಿಂಗ್ ಹ್ಯಾಂಡ್ ಸೇವಾ ಫೌಂಡೇಶನ್ ಅಧ್ಯಕ್ಷ ಕೋರಿ ಯೋಗೀಶ್ ಕುಳಗಟ್ಟೆ ಸಲಹೆ ನೀಡಿದರು.
ತಾಲ್ಲೂಕಿನ ಬಂಜಾರ ಸಮುದಾಯದ ಸಂತ ಸೇವಾಲಾಲ್ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ರಾಣೇಬೆನ್ನೂರು ಮೂಲದ ಪಾದಯಾತ್ರಿ ಮಾಲಾಧಾರಿಗಳಿಗೆ ಪಟ್ಟಣದ ಹೊರವಲಯದ ತರಳಬಾಳು ಶಾಲೆಯ ಬಳಿ ಆರ್ಥಿಕ ಸಹಾಯ ಧನ ನೀಡಿ ಹಣ್ಣು, ಮಜ್ಜಿಗೆ, ನೀರಿನ ಅಂಶವುಳ್ಳ ಹೆಚ್ಚು ಹಣ್ಣುಗಳನ್ನು ಸೇವಿಸುವಂತೆ ಪಾದಯಾತ್ರಿಗಳಿಗೆ ಸಲಹೆ ನೀಡಿದರು.