ಹರಿಹರ, ಫೆ. 10 – ತಾಲ್ಲೂಕಿನ ಗಂಗನರಸಿ ಗ್ರಾಮದ ಸರ್ವೆ ನಂಬರ್ 52 ರಲ್ಲಿನ 2 ಎಕರೆ 24 ಗುಂಟೆ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವ್ಯಾಪ್ತಿಗೆ ಸೇರಿದ ಪ್ರದೇಶವನ್ನು ಹದ್ದುಬಸ್ತು ಮಾಡಿಕೊಡಬೇಕು ಮತ್ತು ಹರಿಹರ ನಗರ ವ್ಯಾಪ್ತಿಗೆ ಒಳಪಟ್ಟ ಬೀರೂರು – ಸಮ್ಮಸಗಿ ಹೆದ್ದಾರಿ ಹಳೆ ಪಿ.ಬಿ. ರಸ್ತೆಯ ರಾಘವೇಂದ್ರ ಮಠದ ಜೋಡಿ ಸೇತುವೆಯ ಸಮೀಪ ಹದಗೆಟ್ಟು ಹೋಗಿರುವ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಕಚೇರಿಯ ಮುಂಭಾಗದ ಆವರಣದಲ್ಲಿ ನಗರದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ.
ಈ ಉಪವಾಸ ಸತ್ಯಾಗ್ರಹದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಎಸ್ ಗೋವಿಂದ, ಉಪಾಧ್ಯಕ್ಷ ಆನಂದ್ ಎಂ. ಆರ್., ಪ್ರಧಾನ ಕಾರ್ಯದರ್ಶಿ ಸುನಿಲ್ ಸಿ.ಹೆಚ್. ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ್, ವಿಜಯ್ ಪೈ, ಕಾಂತ ನಂದಿಗುಡಿ, ಶಿವು, ನಿಂಗರಾಜ್, ಆಟೋ ಶಬರೀಶ್, ಗಣೇಶ್, ಅಮರ್, ನಿರಂಜನ್ ಭಾಗಿಯಾಗಿದ್ದರು.