ದಾವಣಗೆರೆ ಸಮೀಪ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವಕ್ಕೂ ಮುನ್ನ ದೊಡ್ಡಬಾತಿಯ ಶ್ರೀ ರೇಣಸಿದ್ದೇಶ್ವರ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಹಾಗೂ ವೀರಭದ್ರಸ್ವಾಮಿ ದೇವರುಗಳನ್ನು ಗ್ರಾಮದ ರಾಜ ಬೀದಿಗಳಲ್ಲಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಸಂಜೆ 7.30ರ ವೇಳೆಗೆ ಶ್ರೀ ವೀರಭದ್ರ ಸ್ವಾಮಿ ರಥವನ್ನು ಏರಿದ ನಂತರ ಝಂಡಾ ಹರಾಜು ಕಾರ್ಯ ನಡೆಯಿತು. 3,50,101ರೂ.ಗಳಿಗೆ ಆವರಗೊಳ್ಳದ ಗ್ರಾಮಸ್ಥರೊಬ್ಬರು ಝಂಡಾ ಪಡೆದರು. ನಂತರ 8 ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
January 19, 2025