ಅಂಚೆ ಡಬ್ಬಿ ಇಡಲು ಮನವಿ

ಮಾನ್ಯರೇ, 

ಈ ಮುಂಚೆ ಅಶೋಕ ರಸ್ತೆಯಲ್ಲಿ ಅಂಚೆ ಕಚೇರಿ ಇತ್ತು. ನಂತರ, ಆ ಕಚೇರಿಯನ್ನು ಶ್ರೀ ಮುರುಘಾ ಮಠದ ಹಿಂದಿನ ರಸ್ತೆಗೆ ಸ್ಥಳಾಂತರ ಮಾಡಿದರು. ಈಗ್ಗೆ 2 ವರ್ಷಗಳಿಂದ ಈ ಅಂಚೆ ಕಚೇರಿಯನ್ನು ನಿಟ್ಟುವಳ್ಳಿಯ ಹೆಚ್‌ಕೆಆರ್‌  ಸರ್ಕಲ್‌ಗೆ ಸ್ಥಳಾಂತರ ಮಾಡಿರುವುದರಿಂದ ಜನತೆಗೆ ತೊಂದರೆಯಾಗಿದೆ. ಅಲ್ಲದೆ ಈ ಮುಂಚೆ ಇದ್ದ ಅಂಚೆ ಡಬ್ಬಿಯನ್ನು ಸ್ಥಳಾಂತರ ಮಾಡಿರುತ್ತಾರೆ. ಅಶೋಕ ರಸ್ತೆ ಹಾಗೂ ಗಾಂಧಿ ವೃತ್ತದಲ್ಲಿನ ಅಂಚೆ ಡಬ್ಬಿ ಈಗಿಲ್ಲ. ಈ ಭಾಗದ ಜನತೆಗೆ ಟಪಾಲು ಹಾಕಲು ಸಿದ್ದಮ್ಮ ಪಾರ್ಕ್ ಬಳಿ ಇರುವ ಅಂಚೆ ಕಛೇರಿಯ ಎದುರಿನ ಡಬ್ಬದಲ್ಲಿ, ಇಲ್ಲವೇ ಮೇನ್ ಅಂಚೆ ಕಛೇರಿಗೆ ಹೋಗಿ ಅಂಚೆಯ ಪತ್ರಗಳನ್ನು ಅಂಚೆ ಡಬ್ಬಿಗೆ ಹಾಕಬೇಕು. 

ಮೊದಲಿನಂತೆ ಅಶೋಕ ರಸ್ತೆ, ಗಾಂಧಿ ವೃತ್ತ ಮತ್ತು ವಿದ್ಯಾರ್ಥಿ ಭವನದ ಹತ್ತಿರ ಅಂಚೆ ಡಬ್ಬಿಗಳನ್ನು ಸ್ಥಾಪಿಸಬೇ ಕೆಂದು ಪ್ರಾರ್ಥಿಸುತ್ತೇನೆ. ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರವೇ ಈ ಬಗ್ಗೆ ಕಾರ್ಯೋನ್ಮುಖರಾಗಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ 

– ಡಾ. ಸಿ. ಕೆ. ಆನಂದತೀರ್ಥಾಚಾರ್, ದಾವಣಗೆರೆ. 

error: Content is protected !!