ಮಾನವೀಯ ಗುಣ ಮುನ್ನೆಲೆಗೆ ಬಂದರೆ ಸಂವೇದನೆ ಸಾಧ್ಯ

ಮಾನವೀಯ ಗುಣ ಮುನ್ನೆಲೆಗೆ ಬಂದರೆ ಸಂವೇದನೆ ಸಾಧ್ಯ

ಹರಿಹರ :  ಆಧುನಿಕ ಕನ್ನಡ ಸಾಹಿತ್ಯ ಸಂವೇದನೆಯ ಬಹುರೂಪಗಳ ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ

ಹರಿಹರ, ಜ. 29 – ಮನುಷ್ಯರಿಗೆ ಸಂವೇದನೆ  ಬರಬೇಕಾದರೆ ಮಾನವೀಯ ಗುಣಗಳು ಮುನ್ನೆಲೆಗೆ ಬರಬೇಕಾಗಿದೆ ಮಾನವೀಯತೆ ಮತ್ತು ಅಂತಃಕರಣದ ಗುಣಗಳು ಯಾರಲ್ಲಿ ಇರುತ್ತವೆಯೋ. ಅವರು ಸಂವೇದನಾ ಶೀಲರಾಗುವುದಕ್ಕೆ ಸಾಧ್ಯವಿದೆ ಎಂದು ಹಿರಿಯ ಸಾಹಿತಿ, ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. 

ನಗರದ ಗುರು ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಇಂದು ನಡೆದ ಆಧುನಿಕ ಕನ್ನಡ ಸಾಹಿತ್ಯ ಸಂವೇದನೆಯ ಬಹುರೂಪಗಳ ವಿಚಾರ ಸಂಕಿರಣ ಮತ್ತು ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು. 

ಬಂಡಾಯ ಸಾಹಿತ್ಯ 80 ರ ದಶಕದಲ್ಲಿ ಬೀದಿಗೆ ಬಂದು, ಹೋರಾಟಕ್ಕೆ ಮುಂದಾಗಿದೆ. ಆದರೆ ಘೋಷಣೆ ಕೂಗುವುದಕ್ಕೆ ಮತ್ತು ಪ್ರತಿಭಟನೆಯನ್ನು ಮಾಡುವುದಕ್ಕೆ ಸಾಕಷ್ಟು ಜನರು ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಬಂಡಾಯ ಸಾಹಿತ್ಯದ ಕಾರ್ಯವಿಧಾನಗಳು ಬದಲಾಗಬೇಕಾಗಿದೆ. ಸವಾಲು ಮತ್ತು ಸಮಸ್ಯೆಗಳು ಉದ್ಭವವಾದ ಸಮಯದಲ್ಲಿ ಉತ್ತರ ಕೊಡುವುದಕ್ಕೆ ಸಿದ್ದರಾಗಬೇಕಿದೆ. ನಮ್ಮ ದೇಶದಲ್ಲಿ ಓದುಗರು ಮತ್ತು ಬರಹಗಾರರು ಹೆಚ್ಚು ಪ್ರಚಲಿತದಲ್ಲಿ ಕಾಣಿಸಿಕೊಂಡರು. ಅವರಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ನೆಹರು, ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಓದು, ಬರಹದಲ್ಲಿ ಬೌದ್ಧಿಕ ಸಿದ್ದತೆ ಬಲವಾಗಿ, ಸೈದ್ಧಾಂತಿಕವಾಗಿ ಮತ್ತು ಸ್ಪಷ್ಟತೆಯ ದಿಕ್ಕನ್ನು ಹೊಂದಿದ್ದರು. ನಮ್ಮ ವಿಚಾರಗಳು ಏಕಮುಖವಾಗಿ ಇರಬಾರದು. ಏಕಮುಖ ಆದಾಗ ನಾವು ಅಪಾಯದಲ್ಲಿ ಸಾಗಿದ್ದೇವೆ ಎಂಬುದಾಗಿದೆ. ಕೆಲವೊಮ್ಮೆ ವಿರುದ್ಧವಾಗಿ ಬರೆಯುವವರ ಬಗ್ಗೆ ಓದಬೇಕು. ಕಾರಣ ಅವರು ಲೇಖನ ಬರೆಯುವ ಸಮಯದಲ್ಲಿ ತಲ್ಲಣ ಮತ್ತು ತಳಮಳದ ಹೇಗೆ ಇರುತ್ತವೆ ಎಂಬುದು ತಿಳಿಯುತ್ತದೆ. 70 ರ ದಶಕದಲ್ಲಿ ಮುನ್ನೆಲೆಗೆ ಬಂದ ಸಂವೇದನೆಗೆ ಮತ್ತೆ ಜೀವ ಕೊಡುವ ಕಾಲ ಬಂದಿದೆ. 2021-22 ರ ಸರ್ಕಾರದ ವರದಿ ಪ್ರಕಾರ ದಲಿತರ ಮೇಲಿನ ದೌರ್ಜನ್ಯ ಮೊದಲು ಶೇ 1.2 ರಷ್ಟು ಇತ್ತು, ಈವಾಗ ಶೇ 6.4 ರಷ್ಟಿದೆ. ಮಹಿಳೆಯರ ದೌರ್ಜನ್ಯ ಶೇ 15  ರಷ್ಟು ಮತ್ತು ಅತ್ಯಾಚಾರ ದಿನಕ್ಕೆ 86 ಮಹಿಳೆಯರ ಮೇಲೆ ಹಾಗೂ 48 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ನಮ್ಮಲ್ಲಿ ಪರಕೀಯರನ್ನಾಗಿ ನೋಡುವ ಪ್ರಯತ್ನ ಹೆಚ್ಚಾಗಿ, ಸಮಾಜದಲ್ಲಿ ಅಭದ್ರತೆ ಕಾಣಿಸುತ್ತಿದೆ. ಇದರಿಂದಾಗಿ ಹೋರಾಟ ಮತ್ತೆ ಚರ್ಚೆ ಮುಖಾಂತರ ನಿಜವಾದ ಸಂವೇದನೆ ಮತ್ತು ಬಂಡಾಯ ಸಂವೇದನೆ ಏನು ಎಂಬುದನ್ನು ಸ್ಪಷ್ಟವಾಗಿಸಬೇಕಾಗಿರುವುದು ಅನಿವಾರ್ಯವಾಗಿದೆ. ಸಂವೇದನೆ ಎಂಬುದು ಬಹಳ ಸೂಕ್ಷ್ಮವಾದ ವಿಚಾರವಾಗಿದೆ. ನಮ್ಮ ಬದುಕು ವೈರಾಗ್ಯ ಒಕ್ಕೂಟವಾಗಿದೆ. ಏಕಕಾಲದಲ್ಲಿ ಜಾಗೃತಿ ವ್ಯವಸ್ಥೆ ಮತ್ತು ತನ್ಮಯ ವ್ಯವಸ್ಥೆ ಮೂಡಿಸಿಕೊಂಡು ವ್ಯಕ್ತಿ ಸಾಮಾಜಿಕ ಜವಾಬ್ದಾರಿ, ಸಂವೇದನಾ ಶೀಲತೆಯನ್ನು ಹೊಂದಿರಬೇಕು. ಸಂಸ್ಕೃತಿಯ ಜಡತೆ ಮತ್ತು ಚಲನಶಿಲತೆ ಒಟ್ಟಿಗೆ ಸಾಗಿದೆ. ಜಡತೆಯನ್ನು ನಿರಾಕರಿಸಿ ಚಲನಶೀಲತೆಗೆ ಮತ್ತಷ್ಟು ಉತ್ತೇಜನ ನೀಡಬೇಕಾಗುತ್ತದೆ. ಮನುಷ್ಯರಿಗೆ ಎಲ್ಲರಂತೆ ನಾನು ಆಧುನಿಕವಾಗಿ ಬದಕಬೇಕು ಎಂಬ ಆಸೆ ಇರುತ್ತದೆ. ಆದರೆ ಮನೆಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ಸ್ಥಿತ್ಯಂತರದ ಸಂವೇದನೆಗಳು ಸಂಕಟಗಳನ್ನಾಗಿಸುತ್ತವೆ. ಸಾಹಿತ್ಯ ಸೃಷ್ಟಿ ಆಗೋದು ಏಕಾಂತದಿಂದ ಮಾತ್ರ. ಲೋಕಾಂತರ ಮತ್ತು ಏಕಾಂತ ಎರಡನ್ನೂ ಒಟ್ಟಿಗೆ ಸೇರಿಸಿದಾಗ ಏಕ ಚಿಂತನೆಗಳು ಹೆಚ್ಚು ಆಗುತ್ತವೆ.ಸಂವೇದನೆ ಎನ್ನುವುದು ಮಾರುಕಟ್ಟೆಯ ವಸ್ತುವಾಗಿ ಮಾರ್ಪಾಟು ಮೌಲ್ಯಗಳ ಕುಸಿತ ಕಾಣುತ್ತಿದ್ದೇವೆ. ಎಲ್ಲವೂ ಉದ್ಯಮದ ಮಾನದಂಡಗಳ ಮೂಲಕ ನಡೆಯುತ್ತದೆ. ಶಿಕ್ಷಣ ಮಾಧ್ಯಮ, ಪುಸ್ತಕ ಎಲ್ಲವೂ ಸಂಪಾದನೆ ಕೇಂದ್ರಗಳಾಗಿ ಇದು ಅತಿರೇಕಕ್ಕೆ ತೆಗೆದುಕೊಂಡು ಹೋಗಿ ನಿಂತಿರುವದನ್ನು ಕಾಣುತ್ತಿದ್ದೇವೆ. ಮನುಷ್ಯನ ಮನಸ್ಸು ಕೂಡ ಮಾರುಕಟ್ಟೆಯ ರೂಪಾಂತರವಾಗಿದೆ. ರಾಜಕೀಯ ಪ್ರಭುತ್ವ ಆರ್ಥಿಕ ಪ್ರಭುತ್ವವನ್ನು ನಿಯಂತ್ರಣ ಮಾಡುತ್ತಿದೆ. ಧರ್ಮವು ಸಹ ಉದ್ಯಮವಾಗಿದೆ. ಎಲ್ಲವನ್ನೂ ಉದ್ಯಮವಾಗಿ ನೋಡಿದಾಗ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಶಿಕ್ಷಣ ವ್ಯಾಪಾರ ವ್ಯವಸ್ಥೆ ಗೆ ಬಂದು, ಇಂದಿನ ಶೇ 60 ರಷ್ಟು ವಿದ್ಯಾರ್ಥಿಗಳು  ಬಿಜಿನೆಸ್ ಮ್ಯಾನೇಜ್ಮೆಂಟ್ ಸ್ಟಡೀಸ್, ವಾಸ್ತುಶಿಲ್ಪ ಶೇ 15 ರಷ್ಟು, ಹೋಟೆಲ್ ಮೆನೇಜ್ ಮೆಂಟ್ ಶೇ 10 ರಷ್ಟು ಫ್ಯಾಷನ್ ಡಿಜೈನ್ ಶೇ 10 ರಷ್ಟು ಉಳಿದ 5 ರಷ್ಟು ಮಾತ್ರ ರಾಜಕೀಯ ಶಾಸ್ತ್ರ, ಚರಿತ್ರೆ, ಭೂಗೋಳ ಓದುವಾಗ ಸಾಹಿತ್ಯ ಕ್ಷೇತ್ರಕ್ಕೆ ಹಿನ್ನಡೆಯಾಗಿದೆ. 

ದೇಶದಲ್ಲಿ  ಬಹುಮುಖ ಚಿಂತನೆ ಅವಶ್ಯಕತೆಯಿದೆ. ನಾಡಿನಲ್ಲಿ ನಿರ್ಲಕ್ಷ್ಯ ಕ್ಕೆ ಒಳಗಾದವರ ಮತ್ತು ಕಟ್ಟಕಡೆಯವರ ಪರವಾಗಿ ನಿಂತು ಹೋರಾಟ ಮಾಡಬೇಕು. ಅವರನ್ನು ಸಮಾಜ ಗೌರವಿಸುತ್ತದೆ. ಸ್ಟಾರ್ ಹೋಟೆಲ್ ಸಾಹಿತ್ಯಕ್ಕೆ ಮಾಧ್ಯಮದವರು ಹೆಚ್ಚು ಪ್ರಚಾರ ಕೊಡುತ್ತಾರೆ. ಆದರೆ ಜನರ ನಡುವೆ ಇರುವ ಸಾಹಿತ್ಯಕ್ಕೆ ಹೆಚ್ಚು ಮಹತ್ವವ ಇರುತ್ತದೆ ಎಂಬುದನ್ನು ಮರೆಯಬಾರದು. ಸಮಾಜದಲ್ಲಿ ಏಕಕಾಲದಲ್ಲಿ ಪುರೋಹಿತಶಾಹಿ ಮಯ ಬಂಡವಾಳ ಶಾಹಿ ಜಾಗೃತಿ ಹೊಂದಿ ಪರಸ್ಪರ ಕೈ ಜೋಡಿಸಿ ಉದ್ಯಮ ಪ್ರಧಾನವಾದ ಬಂಡವಾಳ ಶಾಹಿಯಿಯಿಂದ ಸಾಹಿತ್ಯ, ಸಂಸ್ಕೃತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಎಲ್ಲಾ ರಂಗಗಳ ರಾಜಕೀಯ ನೇರವಾಗಿ ಪ್ರವೇಶ ಮಾಡಿದ್ದರಿಂದ, ಅದರ ಪ್ರಭಾವ ಹೆಚ್ಚಾಗಿ ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಾವೇರಿ ನಗರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬಹಳ ನಿರ್ಲಕ್ಷ್ಯ ಮಾಡಿದ್ದರ ವಿಚಾರಗಳನ್ನು ನೋಡಿದರೆ ಅದರ ಹೊಣೆಗಾರಿಕೆಯನ್ನು ಒತ್ತವರು ಒಂದು ಪಕ್ಷದವರಿಗೆ ನಡೆದುಕೊಂಡು ಬಂದಿದ್ದರ ಪರಿಣಾಮ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಯಿತು. ಅವರು ಸ್ಪರ್ಧೆಯ ಸಮಯದಲ್ಲಿ ಒಂದು ಪಕ್ಷದ ಅಡಿಯಲ್ಲಿ ನಿಂತವರಂತೆ ವರ್ತನೆಯನ್ನು ಮಾಡಿದ್ದನ್ನು ಕಂಡಿದ್ದನ್ನು ನೋಡಿದರೆ ರಾಜಕೀಯ ಎಲ್ಲಾ ರಂಗಗಳ ಎಷ್ಟೊಂದು ಪ್ರಭಾವ ಬೀರಿತು ಎಂದು ಕಾಣಬಹುದು. ಸಮಾಜದಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಸಾಗಿದರೆ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಆದರೆ ಅದರ ವಿರುದ್ಧವಾಗಿ ನಡೆದುಕೊಂಡ ಸಮಯದಲ್ಲಿ, ಇಂತಹ ವಿಚಾರ ಸಂಕಿರಣಗಳ ಮೂಲಕ ಅಂತವರ ಧ್ವನಿ ಯನ್ನು ಅಡಗಿಸಿ ಸಮಾಜದಲ್ಲಿ ಬದಲಾವಣೆ ತರಬೇಕಾಗಿದೆ ಈ ನಿಟ್ಟಿನಲ್ಲಿ ಮೊದಲ ಪ್ರಯತ್ನ ಹರಿಹರ ನಗರದಿಂದ ಆಗಲಿ ಎಂದು ಈ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ತೇಜಸ್ವಿ ಪಾಟೀಲ್ ಮಾತನಾಡಿ, ನಾಡಿನಾದ್ಯಂತ ಅನೇಕ ಜ್ವಲಂತ ಸಮಸ್ಯೆಗಳಿವೆ. ಆದರೆಸ ಈ ಸಮಾರಂಭದಲ್ಲಿ ಆಧುನಿಕ ಕನ್ನಡ ಸಾಹಿತ್ಯ ಸಂವೇದನೆ ಬಹುರೂಪಗಳು ಎಂದು  ದಲಿತ ಮುಸ್ಲಿಂ ಮಹಿಳೆಯರು ಎಂದು ಪ್ರತ್ಯೇಕವಾದ ವಿಚಾರ ಸಂಕಿರಣ ಮಾಡಿದ್ದು ಸಮಂಜಸವಾಗಿದ್ದರೂ ಸಹ ಕೇವಲ ಕೆಲವನ್ನು ಮಾತ್ರ ವೈಭವೀಕರಸಿ ಮಾಡುವುದು ಸೂಕ್ತವಲ್ಲ ಅನಿಸುತ್ತದೆ. ಇದರಿಂದಾಗಿ ಜ್ವಲಂತ ಸಮಸ್ಯೆಗಳನ್ನು ಹಾಗೆ ಉಳಿದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಉಪನ್ಯಾಸಕ ಎ.ಬಿ. ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಈ ಸಂದರ್ಭದಲ್ಲಿ  ನಿವೃತ್ತ ಪೊಲೀಸ್ ಅಧಿಕಾರಿ ಎನ್. ರುದ್ರಮನಿ, ತೇಜಸ್ವಿ ಪಾಟೀಲ್, ಹೆಚ್.ಕೆ. ಕೊಟ್ರಪ್ಪ, ಹೆಚ್.ನಿಜಗುಣ, ಹೆಚ್. ಚಂದ್ರಪ್ಪ, ಸಿ.ವಿ. ಪಾಟೀಲ್, ಪ್ರೊ. ಎಚ್. ಎ. ಭಿಕ್ಷಾವರ್ತಿಮಠ, ನಂದಿಗಾವಿ ಶ್ರೀನಿವಾಸ್, ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ದಾವಣಗೆರೆ ಈಶ್ವರಪ್ಪ, ಕುಬೇರಪ್ಪ, ದಾದಾಪೀರ್ ನವಲೆಹಾಳ, ಎ.ರಿಯಾಜ್ ಆಮ್ಮದ್, ಬಿ. ರೇವಣಸಿದ್ದಪ್ಪ, ಎಸ್.ಹೆಚ್. ಹೂಗಾರ್, ರಹಿಂ ಸಾಬ್, ಸುಕನ್ಯಾ, ಇಸ್ಮಾಯಿಲ್, ವಿ.ಬಿ. ಕೊಟ್ರೇಶ್, ಪರಮೇಶ್ವರಪ್ಪ ಕತ್ತಿಗೆ,  ಕಸಾಪ ಗೌರವ ಕಾರ್ಯದರ್ಶಿಗಳಾದ ಎಂ. ಚಿದಾನಂದ ಕಂಚಿಕೇರಿ, ರೇವಣನಾಯ್ಕ್, ಜೆ ಕಲೀಂ ಬಾಷಾ, ಹುಲಿಕಟ್ಟಿ ಚೆನ್ನಬಸಪ್ಪ, ಜಿಗಳಿ ಪ್ರಕಾಶ್ ಇತರರು ಹಾಜರಿದ್ದರು. 

error: Content is protected !!