ಮಕ್ಕಳ ವಿಜ್ಞಾನ ಸಮಾವೇಶ : ಅರಬಗಟ್ಟೆ ಕಾಲೇಜು ರಾಜ್ಯಮಟ್ಟಕ್ಕೆ

ಮಕ್ಕಳ ವಿಜ್ಞಾನ ಸಮಾವೇಶ :  ಅರಬಗಟ್ಟೆ ಕಾಲೇಜು ರಾಜ್ಯಮಟ್ಟಕ್ಕೆ

ಹೊನ್ನಾಳಿ, ಜ.27- ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ 2023ರ ಪ್ರಯುಕ್ತ ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಸರ್ಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಜಿ.ಎಸ್. ಅನಿಷಾ ಮತ್ತು ಜೆ. ಧನುಷ್ ಅವರು ಕೊಟ್ಟಿಗೆಯ ನೈರ್ಮಲ್ಯ ಮತ್ತು ಕುರಿ-ಮರಿಗಳ ಆರೋಗ್ಯ ಎಂಬ ಶೀರ್ಷಿಕೆಯಡಿ ತಯಾರಿಸಿದ ವಿಸ್ತೃತ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿನಿಯರಿಗೆ ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ  ವಿತರಿಸಿದರು. ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕ ಮಂಜುನಾಥ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಸಿದ್ಧೇಶ್, ಕಾರ್ಯದರ್ಶಿ ಗುರುಸಿದ್ಧಸ್ವಾಮಿ, ಖಜಾಂಚಿ ಎಚ್.ಎಸ್‌.ಟಿ ಸ್ವಾಮಿ, ಅಂಗಡಿ ಸಂಗಪ್ಪ, ಎಜು ಏಷ್ಯಾ ಶಾಲೆಯ ಮುಖ್ಯ ಶಿಕ್ಷಕಿ ವಾಣಿ ಇತರರು ಇದ್ದರು.

ಸಾಧನೆಗೈದ ವಿದ್ಯಾರ್ಥಿನಿಯರು, ಮುಖ್ಯ ಶಿಕ್ಷಕ ಎಸ್. ಮಂಜಪ್ಪ, ಮಾರ್ಗದರ್ಶಿ ವಿಜ್ಞಾನ ಶಿಕ್ಷಕ ಎಸ್.ಕೆ. ಪುಷ್ಪಕುಮಾರ್ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!