ರಾಣೇಬೆನ್ನೂರಿನಲ್ಲಿ ಸ್ಮಶಾನಕ್ಕಾಗಿ ಅಣಕು ಶವಯಾತ್ರೆ: ಸಮಸ್ಯೆ ಬಗೆಹರಿಸಿದ ತಹಶೀಲ್ದಾರ್

ರಾಣೇಬೆನ್ನೂರಿನಲ್ಲಿ ಸ್ಮಶಾನಕ್ಕಾಗಿ ಅಣಕು ಶವಯಾತ್ರೆ: ಸಮಸ್ಯೆ ಬಗೆಹರಿಸಿದ ತಹಶೀಲ್ದಾರ್

ರಾಣೇಬೆನ್ನೂರು, ಜ.24- ತಾಲ್ಲೂಕಿನ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾದವರ 115 ವರ್ಷಗಳ ಸುದೀರ್ಘ ಕಾಲದ ಸ್ಮಶಾನದ ಸಮಸ್ಯೆಗೆ ಅಂತ್ಯ ಹಾಡಿದ ತಹಶೀಲ್ದಾರ್ ಜಿ.ಎಸ್. ಶಂಕರ್ ಅವರ ತೀರ್ಮಾನ ಸಂತಸ ತಂದಿದೆ.  ಅಲ್ಲದೆ  ಸ್ಮಶಾನಕ್ಕೆ ಹೋಗಲು ದಾರಿಗೆ   ಭೂ ದಾನ ಮಾಡಿದ ರೈತರಾದ ನಿಂಗಪ್ಪಜ್ಜ ನರಸಗೊಂಡರ ಇವರನ್ನೂ ಸಹ ಅಭಿನಂದಿಸುತ್ತೇನೆಂದು  ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಹೇಳಿದರು. 

ನಗರದ ಪ್ರಮುಖ ಬೀದಿಗಳಲ್ಲಿ   ಅಣಕು ಶವ ಯಾತ್ರೆ ನಡೆಸಿ  ಪ್ರತಿಭಟನೆ ನಡೆಸಿದ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಶಂಕರ್ ಅವರು, ನಾನು ಕೂಡ ಹಳ್ಳಿಯಿಂದ ಬಂದವನು, ಹಳ್ಳಿಯ ಕಷ್ಟ ನಷ್ಟ ಏನೆಂಬುದು ನನಗೆ ಗೊತ್ತಿದೆ, ಒಟ್ಟಾರೆ 27 ನೇ ತಾರೀಖು ಖುದ್ದಾಗಿ  ಹುಲ್ಲತ್ತಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಸಭೆ ನಡೆಸಿ, ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಹಾಡುತ್ತೇನೆಂದು   ತಿಳಿಸಿ,   ಗ್ರಾ.ಪಂ. ಪಿ.ಡಿ.ಓ ವೈ.ಟಿ. ಹುಲ್ಲತ್ತಿರವರಿಗೆ ಈ ಬಗ್ಗೆ ಲಿಖಿತ ಆದೇಶ ಮಾಡಿದರು. ಪಿ.ಎಸ್.ಐ. ಸುನೀಲ್ ತೇಲಿ ಉಪಸ್ಥಿತರಿದ್ದರು.

 ಈ ಸಂದರ್ಭದಲ್ಲಿ ಶಿವಕ್ಕ ಕುರಗುಂದ, ಬಸವ್ವ ಹಳ್ಳಿ, ಹನುಮಕ್ಕ ವಡ್ಡರ, ಮಂಜವ್ವ ವಡ್ಡರ, ಪುಟ್ಟವ್ವ ಓಲೇಕಾರ, ರತ್ನವ್ವ ಕೆರೂಡಿ, ನಿರ್ಮಲವ್ವ ದಾವಣಗೆರೆ, ಶಾಂತವ್ವ ಮಲ್ಲಾಪುರ, ಮಲ್ಲವ್ವ ಕುಂಚೂರ,  ರವಿ ಮಲ್ಲಳ್ಳಿ, ಇಕ್ಬಾಲ ಸಾಬ್ ರಾಣೇಬೆನ್ನೂರು, ದ್ಯಾವಪ್ಪ ಅಸುಂಡಿ, ಶಿವಪ್ಪ ಕೆರೂಡಿ, ಗೋವಿಂದ ಲಮಾಣಿ, ಬಸವರಾಜಪ್ಪ ಬ್ಯಾಡಗಿ, ಮಂಜಣ್ಣ ಗುಗ್ಗರಿ, ಮಾರುತಿ ದೊಡ್ಡಮನಿ, ಹನುಮಂತ ಕುಂಚೂರು, ಹೊಳೆಯಪ್ಪ ಹಳ್ಳಿ, ದೇವೇಂದ್ರಪ್ಪ ಕೆ. ಜಯಣ್ಣ ಲಮಾಣಿ ಮುಂತಾದವರು ಹಾಜರಿದ್ದರು.

error: Content is protected !!