ರಾಷ್ಟ್ರೀಯ ಪಕ್ಷಗಳು ದಿಕ್ಕು ತಪ್ಪಿಸುತ್ತಿವೆ

ರಾಷ್ಟ್ರೀಯ ಪಕ್ಷಗಳು ದಿಕ್ಕು ತಪ್ಪಿಸುತ್ತಿವೆ

ಹರಿಹರ, ಜ. 23 -ಕ್ಷೇತ್ರದ ಅಭಿವೃದ್ಧಿ ಮತ್ತು ಶಾಂತಿಗಾಗಿ ಬಡವರ ಪರ ಸ್ಪಂದಿಸುವವರನ್ನು ಆಯ್ಕೆ ಮಾಡಿ ದಾಗ ಮತದಾನ ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ತಿಳಿಸಿದರು.

ನಗರದ ಚಾನಲ್ ಪಕ್ಕದ ರಸ್ತೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮಾವೇಶ ದಲ್ಲಿ ಅವರು ಮಾತನಾಡಿದರು.

ಜೆಡಿಎಸ್ ರಾಜ್ಯ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಎಲ್ಲಾ ಜಾತಿ ಜನಾಂಗದವರನ್ನು ಒಂದೇ ಎಂದು ಭಾವಿಸಿದ್ದಾರೆ. ಜನರಿಗಾಗಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದರು.

ಚುನಾವಣೆ ಹತ್ತಿರ ಬರುತ್ತಿರು ವಂತೆಯೇ ಎರಡೂ ರಾಷ್ಟ್ರೀಯ ಪಕ್ಷಗಳು ಜನರಿಗೆ ಆಸೆಗಳನ್ನು ತೋರಿಸಿ ದಿಕ್ಕು ತಪ್ಪಿಸುತ್ತಿವೆ. ಮತದಾರರು ಇವರಿಗೆ ಮಾನ್ಯತೆ ಕೊಡಬಾರದು ಎಂದರು.

ಜೆಡಿಎಸ್ ಮುಖಂಡ ಅಜಗರ್ ಆಲಿ ಮಾತನಾಡಿ, ಕಳೆದ ಚುನಾವಣೆ ಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದರಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಈ ಬಾರಿ ಅದೇ ತಪ್ಪು ಮಾಡಬಾರದು. ಅಲ್ಪಸಂಖ್ಯಾತರ ಏಳಿಗೆ ಬಯಸುವ ಶಿವಶಂಕರ್ ಪರ ಮತ ಚಲಾಯಿಸಿ ಜೆಡಿಎಸ್ ಬಲವರ್ಧನೆ ಮಾಡಬೇಕು ಎಂದು ಕರೆ ನೀಡಿದರು.

ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಸ್ವಹಿತದ ರಾಜಕೀಯ ಮಾಡುತ್ತಿವೆ. ಇವರಿಂದ ಜನರ ಕಲ್ಯಾಣ ಸಾಧ್ಯವಿಲ್ಲ ಎಂದರು.

ಜಿಲ್ಲಾ ಜೆಡಿಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ದೊಡ್ಡ ಪ್ರಮಾ ಣದಲ್ಲಿ ಜನ ಬರುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಸ್ಪಷ್ಟ ಬಹು ಮತದೊಂದಿಗೆ ಅಧಿಕಾರಕ್ಕೆ ಬರುವ ಲಕ್ಷಣಗಳು ಕಾ ಣುತ್ತಿವೆ ಎಂದರು.

ಈ ವೇಳೆ ತಾಲ್ಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಕೆ.ಕೆ. ಮನ್ಸೂರು ಅಹಮದ್ ಅವರನ್ನು ಆಯ್ಕೆ ಮಾಡಿ, ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರ ಜೆಡಿಎಸ್ ಪಕ್ಷದ ಅಧ್ಯಕ್ಷ  ಹಬೀಬ್ ಉಲ್ಲಾ, ನಗರಸಭೆ ಸದಸ್ಯರಾದ ಆರ್.ಸಿ. ಜಾವೇದ್, ಅಲ್ತಾಫ್, ದಿನೇಶ್ ಬಾಬು, ಮುಖಂಡರಾದ ಮನ್ಸೂರು ಮದ್ದಿ, ಕೆ.ಕೆ. ಮನ್ಸೂರು, ಆಸೀಫ್,  ಆಸ್ರಾಖಾನ್, ಅಶ್ರಫಿ, ನಿಡಗಲ್ ನಾರಾಯಣ, ಅಮರಾವತಿ ನಾಗರಾಜ್, ಮೆಸಾಕ್, ಅಡಕಿ ಕುಮಾರ್, ನಂಜಪ್ಪ, ಮುಜಾಮಿಲ್, ರೆಹಮಾನ್ ಕರಲಹಳ್ಳಿ ಮತ್ತಿತರರು ಹಾಜರಿದ್ದರು. 

error: Content is protected !!