ಮಲೇಬೆನ್ನೂರಿನಲ್ಲಿ ಪ್ರತಿದಿನ 100 ಟೆಸ್ಟ್ ಮಾಡಿಸಿ ; ಡಿಸಿ ಸೂಚನೆ

ಮಲೇಬೆನ್ನೂರು, ಸೆ. 28- ಇಲ್ಲಿನ ಸಮುದಾಯ  ಆರೋಗ್ಯ ಕೇಂದ್ರಕ್ಕೆ ಸೋಮವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆಸ್ಪತ್ರೆಯ ಸ್ವಚ್ಛತೆ ಪರಿಶೀಲಿಸಿದರು.

ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕಾಗಿ ಟೆಸ್ಟ್‌ಗಳನ್ನು ಹೆಚ್ಚಿಸಬೇಕು. ಮಲೇಬೆನ್ನೂರಿನಲ್ಲಿ ಪ್ರತಿದಿನ ಕನಿಷ್ಟ 100 ಟೆಸ್ಟ್‌ಗಳನ್ನು ಮಾಡಿಸಬೇಕೆಂದು ವೈದ್ಯಾಧಿಕಾರಿ ಡಾ. ಲಕ್ಷ್ಮೀದೇವಿ ಹಾಗೂ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಡಿಸಿ ಸೂಚಿಸಿದರು.

ಕೊರೊನಾ ಟೆಸ್ಟ್‌ಗಳನ್ನು ಹೆಚ್ಚಿಸಲು ಜನರ ಮನವೊಲಿಸಬೇಕು.
ಆ ಮೂಲಕ ಕೊರೊನಾದಿಂದ ಜನರನ್ನು ಕಾಪಾಡಬಹುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಆಸ್ಪತ್ರೆಗೆ ಬರುವ ರೋಗಿಗಳಿಗೆ ತಕ್ಷಣ ಸ್ಪಂದಿಸಿ, ಚಿಕಿತ್ಸೆ ನೀಡಿ ಎಂದರು. ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪ ತಹಶೀಲ್ದಾರ್ ಆರ್. ರವಿ, ಟಿ.ಹೆಚ್.ಓ. ಡಾ. ಚಂದ್ರಮೋಹನ್, ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ, ಪುರಸಭೆ ಆರೋಗ್ಯಾಧಿಕಾರಿ ಗುರುಪ್ರಸಾದ್ ಹಾಜರಿದ್ದರು.

error: Content is protected !!