ದಾವಣಗೆರೆ, ಸೆ.28- ನಗರದ ಸಿನಿಮಾ ಸಿರಿ ವತಿಯಿಂದ ಸಂಗೀತ ಸಾಮ್ರಾಟ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್.ಪಿ. ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಟಿ.ಎಂ. ಪಂಚಾ ಕ್ಷರಯ್ಯ, ಕಾರ್ಯದರ್ಶಿ ಎಂ.ಜಿ. ಜಗದೀಶ್, ಸುರಭಿ ಎಸ್.ಶಿವ ಮೂರ್ತಿ, ಸಾಲಿಗ್ರಾಮ ಗಣೇಶ್ ಶೆಣೈ, ಹೆಚ್.ವಿ.ಮಂಜುನಾಥ ಸ್ವಾಮಿ, ಈಶ್ವರಿ ಶಿವಕುಮಾರ್, ಗಾಂಧಿ ಮ್ಯೂಸಿಕ್ ಮಲ್ಲಿಕಾರ್ಜುನ್, ಕಣ್ಕುಪ್ಪಿ ಮುರುಗೇಶಪ್ಪ, ನಾಗರಾಜ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
February 26, 2025