ದಾವಣಗೆರೆ,ಸೆ.28- ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧ ನಕ್ಕೆ ಶೋಕ ವ್ಯಕ್ತಪಡಿಸಿರುವ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ನಗರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯನ್ನು ಸುಬ್ರಹ್ಮಣ್ಯಂ ಅವರೊಂದಿಗೆ ಹಂಚಿಕೊಂಡ ಕ್ಷಣವನ್ನು ಮೆಲುಕು ಹಾಕಿದ್ದಾರೆ.
2020, ಜನವರಿ 12ರಂದು ಸೋಮೇಶ್ವರ ವಿದ್ಯಾಲಯದಲ್ಲಿ ಆಯೋಜನೆಗೊಂಡಿದ್ದ ಸೋಮೇಶ್ವರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇ ಬಾಲಸುಬ್ರಹ್ಮಣ್ಯಂ ಅವರ ದಾವಣಗೆರೆಯ ಕೊನೆ ಭೇಟಿ ಕಾರ್ಯಕ್ರಮವಾಯಿತು ಎಂದು ಶಿವಯೋಗಿಸ್ವಾಮಿ ಹೇಳಿದ್ದಾರೆ.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಾಲಸುಬ್ರಹ್ಮಣ್ಯಂ ಅವರು ಅಂದು ತಮ್ಮ ನಿವಾಸದಲ್ಲೇ ತಂಗಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಕಳೆದ ಕ್ಷಣಗಳನ್ನು ಸ್ಮರಿಸಿರುವ ಡಾ. ಸ್ವಾಮಿ, ಬಾಲಸುಬ್ರಹ್ಮಣ್ಯಂ ಅವರ ವ್ಯಕ್ತಿತ್ವ ಮತ್ತು ತಮ್ಮ ಕಂಠ ಸಿರಿ ಮೂಲಕ ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಿದ್ದಾರೆ.