ಎಲೆಬೇತೂರು-ದಾವಣಗೆರೆ ಮಧ್ಯೆ ಸಿಮೆಂಟ್ ರಸ್ತೆ ಪಕ್ಕ ಭೂ ಕುಸಿತ

ದಾವಣಗೆರೆ, ಸೆ.26- ದಾವಣಗೆರೆ-ಜಗಳೂರು ರಸ್ತೆ ಮಧ್ಯೆ ಎಲೆಬೇತೂರು ಹತ್ತಿರ ಮಳೆ ಹೆಚ್ಚಾಗಿ ನೀರು ಅಲ್ಲೇ ಹರಿದು, ಸಿಮೆಂಟ್ ರಸ್ತೆ ಪಕ್ಕ ಭೂ ಕುಸಿತಗೊಂಡಿದೆ. ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ಸಿಮೆಂಟ್ ರಸ್ತೆ ಹಾಳಾಗುವುದನ್ನು ತಡೆಗಟ್ಟಲು ಹಾಗೂ ಪ್ರಯಾಣಿಕರಿಗೆ ಅಪಾಯ ಇರುವುದರಿಂದ ಇದಕ್ಕೆ ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿಗಳು ತಕ್ಷಣ  ಸರಿಪಡಿಸಿ, ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

error: Content is protected !!