ಜಗಳೂರು, ಸೆ.26- ನ್ಯಾ. ಸದಾಶಿವ ಆಯೋ ಗದ ವರದಿಯನ್ನು ಜಾರಿ ಮಾಡಲು ಮಾದಿಗ ಸಮು ದಾಯದ ಸಚಿವರು ಅಧಿವೇಶನದಲ್ಲಿ ಚರ್ಚಿಸುವ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿ, ಕರ್ನಾಟಕ ಮಾದಿಗರ ಸಂಘದ ವತಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್ದಾರ್ರವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಛೇರಿಯವರೆಗೂ ಮಾದಿಗರ ಸಂಘದ ವತಿಯಿಂದ ಕಾಲ್ನಡಿಗೆ ಜಾಥಾದೊಂದಿಗೆ ತೆರಳಿ ತಹಶೀಲ್ದಾರ್ರ ವರಿಗೆ ಮನವಿ ಸಲ್ಲಿಸಿ ಮಾತನಾ ಡಿದ ಮುಖಂಡರು, ನ್ಯಾ. ಎ.ಜೆ.ಸದಾಶಿವ ಆಯೋಗ ರಚನೆಯಾ ಗಿ ಸುಮಾರು 15 ವರ್ಷಗಳು ಕಳೆದರೂ ವರದಿ ಯನ್ನು ಕೇಂದ್ರ ಸರಕಾರಕ್ಕೆ ಶಿಫಾ ರಸ್ಸು ಮಾಡುವಲ್ಲಿ ಯಾವುದೇ ಆಡಳಿತ ಪಕ್ಷಗಳು ಮುಂದಾಗುತ್ತಿಲ್ಲ. ಮಾದಿಗ ಸಮಾಜದ ಜನಪ್ರತಿನಿಧಿಗಳು ಇದರ ಬಗ್ಗೆ ಚಕಾರ ಎತ್ತದೇ ಇರುವುದು ವಿಪರ್ಯಾಸದ ಸಂಗತಿ ಎಂದರು.
ಪ್ರತಿಭಟನೆಯಲ್ಲಿ ಮಾದಿಗ ಸಮಾಜದ ಮುಖಂಡರಾದ ಹನುಮಂತಾಪುರ ಸತೀಶ್, ಆನಂದ್, ಸತೀಶ್, ಶಂಭುಲಿಂಗಪ್ಪ, ವಿಜಯ್, ಸತ್ಯಮೂರ್ತಿ, ಸಿದ್ದಪ್ಪ, ಎಂ.ರಾಜಪ್ಪ, ಹನುಮಂತಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.