ಹರಪನಹಳ್ಳಿ, ಸೆ.27- ಪಟ್ಟಣದ ಶ್ರೀ ವೆಂಕಟರಮಣ ಪರ್ಮನೆಂಟ್ ಭಂಡಾರ ನಿಧಿ ಲಿಮಿಟೆಡ್ನ ಅಧ್ಯಕ್ಷರಾಗಿ ಟಿ.ವ್ಯಾಸರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ದಿವಾಕರ ಸೋಮಯಾಜಿರವರು ಅನಾರೋಗ್ಯದ ನಿಮಿತ್ತ ಅಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಟಿ.ವ್ಯಾಸರಾಜ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ನಿರ್ದೇಶಕರುಗಳಾದ ಗುಡಿಬಿಂದು ಮಾಧವ ಟಿ.ಎಂ.ಚಂದೂಧರ, ಯು.ದತ್ತಾತ್ರೇಯ ಭಟ್, ಎಲ್.ಬಸವರಾಜ್, ಬಿ.ಮಾಧವರಾವ್, ಕಛೇರಿಯ ಸಿಬ್ಬಂದಿಗಳಾದ ಹಿರಿಯ ಲೆಕ್ಕ ಪರಿಶೋಧಕ ಎಸ್.ಶ್ಯಾಮ್ಸುಂದರ್ ಭಟ್, ಎ. ಶ್ರೀನಿವಾಸ್, ವೈದ್ಯ ವಾದಿರಾಜ್, ಲಕ್ಷ್ಮಿನಾರಾಯಣ್, ಮಂಚಾಲಿ ಸುರೇಂದ್ರ, ಮೈದೂರು ಪ್ರಕಾಶ್ ಉಪಸ್ಥಿತರಿದ್ದರು.