ದಾವಣಗೆರೆ, ಸೆ.16- ಭ್ರಷ್ಟಾಚಾರ ಕಾಂಗ್ರೆಸ್‌ನ ಕೂಸು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಭೂಮಿ ಯಿಂದ ಆಕಾಶದವರೆಗೂ ಬ್ರಹ್ಮಾಂಡ ಭ್ರಷ್ಟಾ ಚಾರ ಮಾಡುತ್ತಾ ಬಂದಿದೆ. ಅಧಿಕಾರ ವಂಚಿತ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯಕ್ಕೊ ಳಗಾದ ಗೂಡ್ಸ್ ರೈಲು ಬೋಗಿಯಂತಿರುವ ಕೆ. ದಿನೇಶ್ ಶೆಟ್ಟಿ ಅವರಿಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜು ಲೋಕಿಕೆರೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯಿಂದ ನಿರಂತರವಾಗಿ ಜಯ ಗಳಿಸುತ್ತಾ ಬಂದಿರುವ ಜಿ.ಎಂ. ಸಿದ್ದೇಶ್ವರ ಅವರ ಅಭಿವೃದ್ಧಿ ಸಹಿಸಿಕೊಳ್ಳದೇ ಕಾಂಗ್ರೆಸ್ ದಾಖ ಲೆಗಳಿಲ್ಲದೇ ಸುಳ್ಳು ಆರೋಪ ಮಾಡುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಸೋತು ಮಾನಸಿಕ ಅಸ್ವಸ್ಥರಾಗಿರುವ ದಿನೇಶ್ ಶೆಟ್ಟಿ ಅವರಿಗೆ ಮಾಡಲು ಕೆಲಸವಿಲ್ಲ. ಅಧಿಕಾರಿಗಳಿಂದ ಹಣ ಪಡೆಯಲು ಪಾಲಿಕೆ ಯಲ್ಲಿ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಸ್ವಲ್ಪ ಪ್ರಚಾರವಾದರೂ ಸಿಗುತ್ತೆ ಎಂಬ ಭಾವನೆಯಿಂದ ಇಂತಹ ಆರೋಪ ಮಾಡುತ್ತಿದ್ದಾರೆ. ದೊಡ್ಡವರ ವಿರುದ್ಧ ಆರೋಪ ಮಾಡಿದರೆ ದೊಡ್ಡ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಸಂಸದರು ತಮ್ಮ ಆಡಳಿತಾವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸ ಮಾಡಿ ದ್ದಾರೆ ಎಂಬುದನ್ನು ದಾಖಲೆ ಸಹಿತ ತರುತ್ತೇವೆ, ಚರ್ಚೆ ಮಾಡಲು ಬನ್ನಿ ಎಂದು ಕಾಂಗ್ರೆಸ್‌ಗೆ ನಾಗರಾಜು ಲೋಕಿಕೆರೆ ಸವಾಲಾಕಿದ್ದಾರೆ.