ದಾವಣಗೆರೆ, ಸೆ.16- ಟ್ರ್ಯಾಕ್ಟರ್ ಮಾರಾಟ ಪ್ರಕ್ರಿಯೆ ಪಾರದ ರ್ಶಕತೆಯಿಂದ ಕೂಡಿಲ್ಲ ಎನ್ನುವ ವಿಷಯದ ಬಗ್ಗೆ ಈ ಹಿಂದೆ ಧ್ವನಿ ಎತ್ತಿದ್ದ ಸಂಸದ ಜಿ.ಎಂ.ಸಿದ್ದೇಶ್ವರ, ಕೃಷಿ ಸಚಿವಾಲಯದಿಂದ ದೇಶದ ಎಲ್ಲಾ ಟ್ರ್ಯಾಕ್ಟರ್ ಉತ್ಪಾದಕರಿಗೆ ಎಂ.ಆರ್.ಪಿ. ಬೆಲೆ ನಮೂ ದಿಸುವಂತೆ ಸೂಚನೆ ನೀಡಿ ಪತ್ರ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.
ಇಂದಿನ ಲೋಕಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ಥಾಪಿಸಿದ ಸಂಸದರು, ಎಲ್ಲಾ ಟ್ರ್ಯಾಕ್ಟರ್ ತಯಾರಕರಿಗೆ ಸರ್ಕಾರದ ವತಿಯಿಂದ ಎಂ.ಆರ್.ಪಿ. ನಮೂದಿಸುವಂತೆ ಪತ್ರ ಬರೆಯಲಾಗಿದೆ ಇದಕ್ಕೆ ಕೃಷಿ ಸಚಿವರನ್ನು ಅಭಿನಂದಿಸುತ್ತೇನೆ. ಆದರೆ, ಈ ವಿಷಯ ಸರ್ಕಾರಿ ಆದೇಶವಾಗಬೇಕು. ಟ್ರ್ಯಾಕ್ಟರ್‍ಗಳು ಹಾಗೂ ಕೃಷಿ ಪರಿಕರಗಳು ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಇದಕ್ಕೆ ಸರ್ಕಾರಿ ಆದೇಶ ಹೊರಡಿಸಿದರೆ ಮಾತ್ರ ಕಡಿವಾಣ ಬೀಳಲಿದೆ ಎಂದು ಸಂಸತ್ತಿನಲ್ಲಿ ಗಮನ ಸೆಳೆದರು.
ಕಾರು ತಯಾರಿಸುವ ಎಲ್ಲಾ ಕಂಪನಿಯವರು ಎಂ.ಆರ್.ಪಿ ಬೆಲೆಯನ್ನು ಅವರ ಸ್ವಂತ ವೆಬ್‍ಸೈಟ್‍ಗಳಲ್ಲಿ ನಮೂದಿಸುತ್ತಿರುವಾಗ ಇದೇ ಮಾನದಂಡ ಟ್ರ್ಯಾಕ್ಟರ್ ತಯಾರಕರಿಗೆ ಏಕೆ ಅನ್ವಯಿಸುತ್ತಿಲ್ಲ ಎಂದರು. ಪವರ್ ಟಿಲ್ಲರ್ ತಯಾರಿಕರಿಗೆ, ಕೃಷಿ ಪರಿಕರಗಳಾದ ಕಂಬೈನ್ಡ್ ಹಾರ್ವೆಸ್ಟರ್ಸ್, ರೋಟೋವೇಟರ್ಸ್ ಮತ್ತು ಭತ್ತದ ನಾಟಿ ಮಾಡುವ ಯಂತ್ರಗಳ ತಯಾರಕರೂ ಕೂಡ ಎಂ.ಆರ್.ಪಿ. ಬೆಲೆಯನ್ನು ನಮೂದಿಸುವಂತಾಗಬೇಕು ಎಂದರು.
ಸಂಬಂಧಿಸಿದ ಸರ್ಕಾರಿ ಇಲಾಖೆ ವಿತರಕರ ಮಟ್ಟದಲ್ಲಿ ಎಂ.ಆರ್.ಪಿ. ನಮೂದಿಸುವ ವಿಷಯದ ಕುರಿತು ಅಡ್ಡ ಪರಿಶೀಲನೆ ನಡೆಸಿ ಏನಾದರೂ ಲೋಪ ಕಂಡುಬಂದಲ್ಲಿ ಅಂತವರ ಮೇಲೆ ತೀವ್ರತರನಾದ ಕ್ರಮ ಕೈಗೊಳ್ಳಬೇಕು ಎಂದರು.
ಎಂ.ಆರ್.ಪಿ. ನಿಗದಿ ಮಾಡುವಲ್ಲಿ ವಂಚನೆ ಮಾಡುವುದು ಗುರುತರವಾದ ಅಪವಾದ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ವಂಚನೆ ಮಾಡುವ ಟ್ರ್ಯಾಕ್ಟರ್ ಹಾಗೂ ಕೃಷಿ ಪರಿಕ ರಗಳ ತಯಾರಕರ ಮೇಲೆ ರೈತರ ಹಿತದೃಷ್ಟಿಯನ್ನು ಗಮನದಲ್ಲಿ ಟ್ಟುಕೊಂಡು ಗ್ರಾಹಕ ರಕ್ಷಣೆ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಷಯ ಕುರಿತು ಕೃಷಿ ಸಚಿವಾಲಯ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಸಂಸತ್ತಿನ ಗಮನ ಸೆಳೆದರು.