ಛತ್ರಿಗಳ ಆಶ್ರಯ ಪಡೆದು ಭಾಷಣ ಮಾಡಿದ ಜನಪ್ರತಿನಿಧಿಗಳು
ಹೊನ್ನಾಳಿ, ಸೆ.12- ಇಲ್ಲಿನ ಎಪಿಎಂಸಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ-ಉದ್ಘಾಟನಾ ಸಮಾರಂಭಕ್ಕೆ ಮಳೆ ಅಡ್ಡಿಯಾಯಿತು.
ಡಿಸಿಎಂಗಳಾದ ಗೋವಿಂದ ಎಂ.ಕಾರಜೋಳ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಮತ್ತಿತರೆ ಗಣ್ಯರು ಸುರಿವ ಮಳೆಯಲ್ಲೇ ವೇದಿಕೆಯ ಮೇಲೆ ಛತ್ರಿಗಳ ಅಡಿಯಲ್ಲಿ ನಿಂತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಳೆಯ ತೀವ್ರತೆಗೆ ವೇದಿಕೆಯ ಮೇಲೆ ಕುಳಿತವರ ಮೇಲೂ ನೀರು ಹನಿಯಲಾರಂಭಿಸಿತು. ಇದರಿಂದಾಗಿ, ಸಚಿವರ ಸಹಾಯಕರು ಛತ್ರಿಗಳನ್ನು ಹಿಡಿದುಕೊಂಡು ಮಳೆ ನೀರಿನಿಂದ ರಕ್ಷಣೆ ಒದಗಿಸಲು ಮುಂದಾದರು. ಸಂಸದ ಜಿ.ಎಂ. ಸಿದ್ಧೇಶ್ವರ ಕೂಡ ಛತ್ರಿಯ ಅಡಿಯಲ್ಲೇ ನಿಂತು ಮಾತನಾಡಿದರು.