ಶ್ರಮಿಕರ ಭವನಕ್ಕೆ ನಿವೇಶನ ಕೋರಿ ಹಮಾಲರಿಂದ ಮನವಿ

ಹರಿಹರ, ಸೆ.13- ಹಮಾಲರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಶ್ರಮಿಕರ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಕೊಡುವಂತೆ ಮಹಜೇನಹಳ್ಳಿ ಗ್ರಾಮದೇವತೆ ಹಮಾಲರ ಸಂಘದಿಂದ ಎಪಿಎಂಸಿಗೆ ಮನವಿ ಸಲ್ಲಿಸಲಾಯಿತು.

ಈ ಹಿಂದೆ ಭವನಕ್ಕಾಗಿ ಕೇಳಿಕೊಂಡಿದ್ದ ಅಳತೆಯ ನಿವೇಶನ  ಲಭ್ಯವಿಲ್ಲವೆಂದು ತಿಳಿಸಿದ ಹಿನ್ನೆಲೆಯಲ್ಲಿ ಅದಕ್ಕಿಂತ ಕಡಿಮೆ ಅಳತೆಯ ನಿವೇಶನಕ್ಕಾಗಿ ಕಳೆದ ಎರಡು ತಿಂಗಳ ಹಿಂದೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಸಂಘದ ಅಧ್ಯಕ್ಷ ಎಕ್ಕೇಗೊಂದಿ ಹೆಚ್.ಬಿ. ರುದ್ರೇಗೌಡ,  ಗೌರವಾಧ್ಯಕ್ಷ ಹೆಚ್.ಕೆ. ಕೊಟ್ರಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೊಸಮನಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೆಹಮಾನ್, ನಂಜಪ್ಪ, ಹೆಚ್. ಪರಶುರಾಮಪ್ಪ, ಲೋಕೇಶ್, ಸುಬ್ಬಣ್ಣ, ನಾಗರಾಜ, ಗೋವಿಂದಪ್ಪ, ಕರೀಮ್, ಸುಲ್ತಾನ್ ಸಾಬ್, ರೇವಣಸಿದ್ದಪ್ಪ, ಬಸವರಾಜ, ಎನ್. ನಾಗಪ್ಪ, ವಿ. ಪರಸಪ್ಪ, ಶೇಖರಪ್ಪ, ಬಿ. ಬಸಪ್ಪ ಇನ್ನಿತರರಿದ್ದರು. 

error: Content is protected !!