ದಾವಣಗೆರೆ, ಸೆ. 13- ಜಿಲ್ಲೆಯಲ್ಲಿ ಭಾನುವಾರ 144 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. ಕುಂದುವಾಡದ ಕೆ.ಹೆಚ್.ಪಿ. ಕಾಲೋನಿಯ 43 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 46, ಹರಿಹರ 69, ಜಗಳೂರು 1, ಚನ್ನಗಿರಿ 17, ಹೊನ್ನಾಳಿ 9 ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು 322 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 12897 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 10293 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 2378 ಸಕ್ರಿಯ ಪ್ರಕರಣಗಳಿವೆ.
ಮಲೇಬೆನ್ನೂರು ಹೋಬಳಿಯಲ್ಲಿ 32 ಜನರಿಗೆ ಸೋಂಕು
ಮಲೇಬೆನ್ನೂರು : ಭಾನುವಾರ ಹೋಬಳಿಯಲ್ಲಿ 32 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ನಂದಿಗಾವಿಯಲ್ಲಿ 9 ಜನರಿಗೆ, ಜಿ.ಬೇವಿನಹಳ್ಳಿಯಲ್ಲಿ ಐವರಿಗೆ, ಮಲೇಬೆನ್ನೂರಿನಲ್ಲಿ ಮೂವರಿಗೆ, ಉಕ್ಕಡಗಾತ್ರಿ, ಗುಳದಹಳ್ಳಿ, ಹೊಳೆಸಿರಿಗೆರೆಯಲ್ಲಿ ತಲಾ ಇಬ್ಬರಿಗೆ ಮತ್ತು ಜಿಗಳಿ, ಕೊಪ್ಪ, ಹಿಂಡಸಘಟ್ಟ, ಕುಂಬಳೂರು, ಹೊಸಪಾಳ್ಯ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.