ದಾವಣಗೆರೆ ನಿವಾಸಿ ದಿ|| ಪಟೇಲ್ ಜಿ. ಜಯಪ್ಪನವರ ಪುತ್ರರೂ, ಹೆಸರಾಂತ ಶಸ್ತ್ರಚಿಕಿತ್ಸಾ ತಜ್ಞರೂ, ಚಿತ್ರದುರ್ಗದ ಶ್ರೀ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರೂ, 22 ಕೆರೆಗಳ ಏತ ನೀರಾವರಿ ಸಮಿತಿಯ ಹೋರಾಟದ ಅಧ್ಯಕ್ಷರೂ, ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥರೂ ಆದ ಡಾ|| ಜಿ. ಮಂಜುನಾಥ ಗೌಡ ಅವರು ದಿನಾಂಕ 08.09.2020ರ ಮಂಗಳವಾರ ರಾತ್ರಿ 9.30 ಗಂಟೆಗೆ ಅಕಾಲಿಕ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 09.09.2020ರ ಬುಧವಾರ ಸಂಜೆ 4 ಗಂಟೆಗೆ ಜಗಳೂರು ತಾಲ್ಲೂಕು ತುಪ್ಪದಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024