ದಾವಣಗೆರೆ, ಸೆ. 8 – ಜಿಲ್ಲೆಯಲ್ಲಿ ಮಂಗಳವಾರ 240 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇದೇ ದಿನ 198 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 11,637 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8,564 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2,855 ಸಕ್ರಿಯ ಪ್ರಕರಣಗಳಿವೆ.
ದಾವಣಗೆರೆ ತಾಲ್ಲೂಕಿನಲ್ಲಿ 88, ಹರಿಹರದಲ್ಲಿ 44, ಜಗಳೂರಿನಲ್ಲಿ 15, ಚನ್ನಗಿರಿಯಲ್ಲಿ 45, ಹೊನ್ನಾಳಿಯಲ್ಲಿ 43 ಹಾಗೂ ಹೊರ ಜಿಲ್ಲೆಯ 8 ಜನರಲ್ಲಿ ಸೋಂಕು ದೃಢಪಟ್ಟಿದೆ.
ಇದೇ ದಿನ ದಾವಣಗೆರೆ ತಾಲ್ಲೂಕಿನ 93, ಹರಿಹರದ 26, ಜಗಳೂರಿನ ಒಬ್ಬರು, ಚನ್ನಗಿರಿಯ 47, ಹೊನ್ನಾಳಿಯ 23 ಹಾಗೂ ಹೊರ ಜಿಲ್ಲೆಗಳ 8 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಶಾಮನೂರಿನ 40 ವರ್ಷದ ಪುರುಷರೊಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ವಿನೋಬನಗರದ 46 ವರ್ಷದ ಪುರುಷರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರಿಗೆ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಸಮಸ್ಯೆಗಳೂ ಇದ್ದವು.