ಜಗಳೂರು, ಸೆ. 2 – ಸಮಾಜದ ತಾರತಮ್ಯ ತೊಲಗಿಸಲು ಜೀವನ ಮುಡಿಪಾಗಿಟ್ಟ ನಾರಾಯಣ ಗುರು ಆದರ್ಶವಾಗಿದ್ದಾರೆ ಎಂದು ತಹಶೀಲ್ದಾರ್ ನಾಗವೇಣಿ ಅವರು ತಿಳಿಸಿದರು. ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ನಾರಾಯಣ ಗುರು ಜಯಂತ್ಯೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ನಾರಾಯಣ ಗುರು ಅವರು ಸಾಮಾಜಿಕ ತಾರತಮ್ಯದ ವಿರುದ್ದ ಧ್ವನಿಯೆತ್ತಿ ಸಮಾಜ ಸುಧಾರಣೆ ಯಿಂದ ಜನಮಾನಸದಲ್ಲಿ ನೆಲೆಸಿದ್ದಾರೆ. ಆದರ್ಶಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈಡಿಗ ಸಮಾಜದ ಮುಖಂಡರಾದ ಇ.ಎನ್. ಪ್ರಕಾಶ್, ಮಂಜಣ್ಣ, ಕಂದಾಯ ನಿರೀಕ್ಷಕ ಕುಬೇಂದ್ರನಾಯ್ಕ, ವಿಜಯಕುಮಾರ್ ಮತ್ತಿತರರು ಹಾಜರಿದ್ದರು.