ರಾಣೇಬೆನ್ನೂರಿಗೆ ನಟ ಸುದೀಪ್ ಕರೆಸಲು ತೀರ್ಮಾನ

ರಾಣೇಬೆನ್ನೂರು, ಸೆ.2 – ನಟ ಕಿಚ್ಚ ಸುದೀಪ್ ಅವರನ್ನು ಕರೆಸಿ ಅದ್ಧೂರಿಯಾಗಿ ಸನ್ಮಾನಿಸಲು ನಿನ್ನೆ  ಅವರ ಅಭಿಮಾನಿಗಳು  ತೀರ್ಮಾನಿಸಿದರು.

ಇಲ್ಲಿನ ಮಾರುತಿ ನಗರದ ಶ್ರೀ ರೇಣುಕಾ ಎಲ್ಲಮ್ಮ ಅಂಧ ಮತ್ತು ಕಿವುಡ ಮಕ್ಕಳ ಶಾಲೆಯಲ್ಲಿ ನಡೆದ ಸುದೀಪ್ ಹುಟ್ಟುಹಬ್ಬದ ಸರಳ ಸಮಾರಂಭದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ,  ಎಚ್.ಆರ್.ಶಿವಕುಮಾರ, ನಗರ ಸಭೆ ಸದಸ್ಯರಾದ ಮಲ್ಲಣ್ಣ ಅಂಗಡಿ, ಪಾಂಡು ರಂಗ ಗಂಗಾವತಿ, ಬಸವರಾಜ ಚಳಗೇರಿ, ಹನುಮಂತಪ್ಪ ಕಬ್ಬಾರ ಪಾಲ್ಗೊಂಡಿದ್ದರು.

error: Content is protected !!