ಇ-ಸಂಜೀವಿನಿ ಆ್ಯಪ್ ಬಳಸಿ ವೈದ್ಯರೊಂದಿಗೆ ವೀಡಿಯೋ ಮೂಲಕ ಸಂದರ್ಶಿಸಿ : ಜಿಲ್ಲಾಧಿಕಾರಿ

ಇ-ಸಂಜೀವಿನಿ ಆ್ಯಪ್ ಬಳಸಿ ವೈದ್ಯರೊಂದಿಗೆ ವೀಡಿಯೋ ಮೂಲಕ ಸಂದರ್ಶಿಸಿ : ಜಿಲ್ಲಾಧಿಕಾರಿ - Janathavaniದಾವಣಗೆರೆ, ಸೆ.2- ಕೋವಿಡ್-19 ಸಂದರ್ಭದಲ್ಲಿ ಸಾಮಾನ್ಯವಾಗಿ ಕೆಮ್ಮು, ಜ್ವರ, ಮತ್ತು ಇತರೆ ರೋಗಗಳಿಂದ ಬಳಲುತ್ತಿರುವವರು ಇ- ಸಂಜಿವಿನಿ ಆ್ಯಪ್  ಬಳಸಿ ವೈದ್ಯರೊಂದಿಗೆ ಸಂದರ್ಶಿಸಿ ಆರೋಗ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.

ಕೊರೊನಾ ತಡೆಗಟ್ಟುವ ಸಲುವಾಗಿ ಭಾರತ ಸರ್ಕಾರವು ಸಾರ್ವಜನಿಕರಿಗೆ ಮನೆಯಲ್ಲಿಯೇ ಇದ್ದು,  ಸುರಕ್ಷಿತವಾಗಿ  ಚಿಕಿತ್ಸೆ  ಪಡೆಯುವಂತೆ ಕೇಂದ್ರ ಆರೋಗ್ಯ ಮಂತ್ರಾಲಯವು ರಾಷ್ಟ್ರೀಯ  ಟೆಲಿ ಸಮಾಲೋಚನ ಸೇವೆ ಎಂಬ ಹೆಸರಿನಲ್ಲಿ ಈ ಆಪ್  ಸಿದ್ದ ಪಡಿಸಲಾಗಿದೆ.

ಆಸ್ವತ್ರೆಗೆ ತೆರಳಲು ಸಾಧ್ಯವಾಗದಿದ್ದವರು ಮೊಬೈಲ್ ಮೂಲಕ ವೈದ್ಯರು ತಮಗೆ ಚಿಕಿತ್ಸೆಯನ್ನು ನೀಡುವ ಅವಕಾಶವನ್ನು ಇ- ಸಂಜೀವಿನಿ ಆಪ್ ಮೂಲಕ ವೀಡಿಯೊ ಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು.

ಇ- ಸಂಜೀವಿನಿ ಆಪ್ ಬಳಸುವ ವಿಧಾನ ಟೆಲಿ ಸಮಾಲೋಚನೆ ಸೇವೆ ಪಡೆಯಲು ಮೊಬೈಲ್‍ನಲ್ಲಿ ಪ್ಲೇ ಸ್ಟೋರ್ ಅಥವಾ ಕಂಪ್ಯೂಟರ್ ಗೂಗಲ್‍ನಲ್ಲಿ ಈ ಸಂಜೀವಿನಿ ಓ.ಪಿ.ಡಿ ಎಂದು ನಮೂದಿಸಬೇಕು. ಆಗ ನಿಮಗೊಂದು ಕೇಂದ್ರ ಸಚಿವಾಲಯದ ಮುಖಪುಟ ತೆರೆದುಕೊಳ್ಳುತ್ತದೆ.

ನಂತರ ಅದನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು, ನಂತರರ ಇದರಲ್ಲಿ ಪೇಷೆಂಟ್ ರಿಜಿಸ್ಟ್ರೇಷನ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ ನಿಮಗೊಂದು ಓಟಿಪಿ ಸಂಖ್ಯೆ ಬರಲಿದೆ. ಆ ಓಟಿಪಿ ಸಂಖ್ಯೆಯನ್ನು ನಮೂದಿಸಿದರೆ ರಿಜಿಸ್ಟ್ರೇಷನ್ ಅಪ್ಲಿಕೇಶನ್ ತರೆದುಕೊಳ್ಳುತ್ತದೆ ಇದರಲ್ಲಿ ರೋಗಿಯ ಹೆಸರು ಲಿಂಗ, ವಯಸ್ಸು, ಮೊಬೈಲ್‍ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನಿಮಗೊಂದು ಟೋಕನ್ ನಂಬರ್ ಬರಲಿದೆ. ಈ ಟೋಕನ್ ನಂಬರ್ ನೀಡಿ  ವೈದ್ಯ ರನ್ನು ವೀಡಿಯೊ ಕಾಲ್ ಮೂಲಕ ಸಂಪರ್ಕಿಸಬಹುದಾಗಿದೆ.

ಸೇವೆಯು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

error: Content is protected !!