ಜಿಲ್ಲೆಯಲ್ಲಿ 255 ಪಾಸಿಟಿವ್ 6 ಸಾವು, 371 ಬಿಡುಗಡೆ

ದಾವಣಗೆರೆ, ಆ. 31-ಜಿಲ್ಲೆಯಲ್ಲಿ ಸೋಮವಾರ 255 ಜನರಿಗೆ ಕೊರೊನಾ ಸೋಂಕು ದೃಢಪಟ್ಟ ವರದಿಯಾಗಿದೆ. 6 ಜನರು ಸಾವನ್ನಪ್ಪಿದ್ದು, 371 ಜನರು ಕೋವಿಡ್ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಈ ವರೆಗೆ 9486 ಜನರಲ್ಲಿ ಸೋಂಕು ದೃಢಪಟ್ಟಿದ್ದು, 7003 ಜನರು ಸೋಂಕು ಮುಕ್ತರಾಗಿ ಬಿಡು ಗಡೆಯಾಗಿದ್ದಾರೆ. ಪ್ರಸ್ತುತ 2292 ಸಕ್ರಿಯ ಪ್ರಕರಣಗಳಿವೆ.

  ದಾವಣಗೆರೆ ತಾಲ್ಲೂಕಿನಲ್ಲಿ 134, ಹರಿಹರ 23, ಜಗಳೂರು 26, ಚನ್ನಗಿರಿ 38, ಹೊನ್ನಾಳಿ 26 ಹಾಗೂ ಹೊರ ಜಿಲ್ಲೆಯ 8 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ರಂಗನಾಥ ಬಡಾವಣೆಯ 79 ವರ್ಷದ ಮಹಿಳೆ, ಎಸ್.ಎಸ್. ಬಡಾವಣೆಯ 68 ವರ್ಷದ ಮಹಿಳೆ, ನಿಟುವಳ್ಳಿಯ 53 ವರ್ಷದ ಪುರುಷ, ಭಗತ್ ಸಿಂಗ್ ನಗರದ 74 ವರ್ಷದ ಪುರುಷ, ಹಳೇಕುಂದುವಾಡದ 69 ವರ್ಷದ ಮಹಿಳೆ ಹಾಗೂ ಲಕ್ಷಿಸಾಗರದ 65 ವರ್ಷದ ಪುರುಷ ಸೋಂಕಿನಿಂದ ಮೃತಪಟ್ಟಿದ್ದಾರೆ.


ಮಲೇಬೆನ್ನೂರು ಹೋಬಳಿಯಲ್ಲಿ 17 ಸೋಂಕು

ಮಲೇಬೆನ್ನೂರು : ಹೋಬಳಿ ಯಲ್ಲಿ ಕಳೆದ 2 ದಿನಗಳಲ್ಲಿ 12 ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ.

ಭಾನುವಾರ ಮಲೇಬೆನ್ನೂರಿನ 2, ಕೆ.ಎನ್. ಹಳ್ಳಿ ಹಾಗೂ ನಂದಿಗುಡಿಯಲ್ಲಿ ತಲಾ ಒಬ್ಬರಿಗೆ ಮತ್ತು ಸೋಮವಾರ ಮಲೇಬೆನ್ನೂರಿನಲ್ಲಿ ನಾಲ್ವರಿಗೆ, ನಂದಿತಾವರೆ, ಕೆ.ಎನ್‌. ಹಳ್ಳಿಯಲ್ಲಿ ತಲಾ ಒಬ್ಬರಿಗೆ, ಹೊಳೆಸಿರಿಗೆರೆಯಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

124 ಜನರಿಗೆ ಟೆಸ್ಟ್‌ : ಸೋಮವಾರ ಧೂಳೆಹೊಳೆಯಲ್ಲಿ 60 ಜನರಿಗೆ ಮತ್ತು ನಂದೀಶ್ವರ ಕ್ಯಾಂಪ್‌ನಲ್ಲಿ 64 ಜನರಿಗೆ ಕೊರೊನಾ ರಾಪಿಡ್‌ ಟೆಸ್ಟ್ ಮಾಡಲಾಗಿದ್ದು, ಧೂಳೆಹೊಳೆಯಲ್ಲಿ ಒಬ್ಬರಿಗೆ ಹಾಗೂ ನಂದೀಶ್ವರ ಕ್ಯಾಂಪ್‌ನಲ್ಲಿ ನಾಲ್ವರಿಗೆ ಸೋಂಕು ಕಂಡುಬಂದಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ತಿಳಿಸಿದ್ದಾರೆ.

error: Content is protected !!