ದಾವಣಗೆರೆ ಶಕ್ತಿನಗರ ವಾಸಿ ಕೆರೆಯಾಗಳಹಳ್ಳಿ ದಿ|| ನಾಗಪ್ಪನವರ ಪುತ್ರ, ಶಿಕ್ಷಕರಾದ ಶ್ರೀ ಕೆ.ಎನ್. ಚಂದ್ರಪ್ಪ ಅವರು ದಿನಾಂಕ 29.08.2020ರ ಶನಿವಾರ ಸಂಜೆ 4.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 30.08.2020ರ ಭಾನುವಾರ ಬೆಳಿಗ್ಗೆ 11-00 ಗಂಟೆಗೆ ಮೃತರ ಸ್ವಗ್ರಾಮ ದಾವಣಗೆರೆ ತಾಲ್ಲೂಕು ತುಂಬಿಗೆರೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024