ದಾವಣಗೆರೆ, ಆ.29- ಐಸಿಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಚಂದ್ರನಹಳ್ಳಿ ಗ್ರಾಮದಲ್ಲಿ ಯಂತ್ರದ ಮುಖಾಂತರ ನಾಟಿ ಮಾಡಿದ ಭತ್ತದ ತಾಕುಗಳಿಗೆ ಭೇಟಿ ನೀಡಿದರು.
ಕೇಂದ್ರದ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ್ ಅವರು ಯಂತ್ರದ ಮುಖಾಂತರ ನಾಟಿ ಮಾಡಿದ ಭತ್ತದಲ್ಲಿ ಕಳೆ ನಿರ್ವಹಣೆಗೆ ಕೋನೋ ವೀಡರ್ ಬಳಸುವುದರಿಂದ ಕಳೆ ನಿರ್ವಹಣೆಯ ಜೊತೆಗೆ ಭೂಮಿಯಲ್ಲಿ ಗಾಳಿ ಆಡುವಿಕೆ ಹೆಚ್ಚಾಗಿ ತೆಂಡೆಗಳು ಹೆಚ್ಚಾಗುತ್ತವೆ. ಕೂಲಿ ಕಾರ್ಮಿಕರ ಕೊರತೆಯಿಂದ ಕಳೆ ನಿರ್ವಹಣೆಗೆ ಇದೊಂದು ಸೂಕ್ತ ಪರಿಹಾರ ಎಂದರು.
ಕೇಂದ್ರದ ಮಣ್ಣು ವಿಜ್ಞಾನಿ ಹೆಚ್.ಎಂ.ಸಣ್ಣಗೌಡ್ರು ಭತ್ತದಲ್ಲಿ ಪೋಷಕಾಂಶಗಳ ನಿರ್ವಹಣೆ ಕಡೆ ಗಮನಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ವಿತರಣಾ ತಜ್ಞರಾದ ರಘುರಾಜ್, ವಿಜಯಕುಮಾರ್ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.