ಹರಪನಹಳ್ಳಿ : ರಾಯಣ್ಣನ ಪ್ರತಿಮೆ ಪುನರ್ ಪ್ರತಿಷ್ಠಾಪನೆಗೆ ಒತ್ತಾಯ

ಹರಪನಹಳ್ಳಿ, ಆ.29- ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಯೋಧ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ತೆರವುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರದ ನೀತಿ ಖಂಡಿಸಿ ತಾಲ್ಲೂಕು ಶ್ರೀ ಬೀರೇಶ್ವರ ಕುರುಬರ ಸೇವಾ ಸಂಘ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದರು.

ನೀಲಗುಂದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ. ಪರಶುರಾಮಪ್ಪ ಮಾತನಾಡಿ, ಅಪ್ರತಿಮ ಶೂರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಅನಾವರಣಗೊಳಿಸಲು ಅಧಿಕೃತವಾಗಿ ಅನುಮತಿ ಪಡೆದಿದ್ದರೂ ಸಹ ಪುತ್ಥಳಿಯನ್ನು ತೆರವುಗೊಳಿಸಿ ಸ್ವಾತಂತ್ರ್ಯ ಸೇನಾನಿಗೆ ಅಪಮಾನ ಮಾಡಿದ ಬಗ್ಗೆ ಸರ್ಕಾರ ರಾಜ್ಯದ ಜನತೆಗೆ ಬೇಷರತ್ ಕ್ಷಮೆಯಾ ಚಿಸಿ, ಪುತ್ಥಳಿಯನ್ನು ಅದೇ ಸ್ಥಳದಲ್ಲಿ ಪುನರ್ ಪ್ರತಿ ಷ್ಠಾಪಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿರುವ ಬುಡಕಟ್ಟು ಕುರುಬ ಜಾತಿಯನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ನ್ಯಾಯವಾದಿ ಇದ್ಲಿ ರಾಮಪ್ಪ ಚಿಗಟೇರಿ ಬ್ಲಾಕ್‌ ಟಾಸ್ಕ್‌ಫೋರ್ಸ್‌ ಅಧ್ಯಕ್ಷ ಮುತ್ತಿಗಿ ಸಾಬಳ್ಳಿ ಜಂಬಣ್ಣ, ಪುರಸಭೆ ಸದಸ್ಯರಾದ ಜೋಗಿನಾರ್ ಭರತೇಶ್, ಉದ್ದಾರ ಗಣೇಶ್, ಕನಕ ಯುವ ಸೇನೆ ಅಧ್ಯಕ್ಷ ಅಲಮರಸೀಕೆರೆ ಹೆಚ್.ಪರಶುರಾಮ ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!