ಜಿಲ್ಲೆಯಲ್ಲಿ 317 ಪಾಸಿಟಿವ್ 2 ಸಾವು, 228 ಬಿಡುಗಡೆ

ಜಿಲ್ಲೆಯಲ್ಲಿ 317 ಪಾಸಿಟಿವ್ 2 ಸಾವು, 228 ಬಿಡುಗಡೆ - Janathavani

ದಾವಣಗೆರೆ, ಆ. 29- ಜಿಲ್ಲೆಯಲ್ಲಿ ಶನಿವಾರ 317 ಜನರಿಗೆ ಕೊರೊನಾ ಸೋಂಕು ತಗುಲಿದ ವರದಿಯಾಗಿದೆ. ಇಬ್ಬರು ಸಾವನ್ನಪ್ಪಿದ್ದು, 228 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ

ಇಲ್ಲಿಯವರೆಗೆ ಜಿಲ್ಲೆಯಲ್ಲಿ 8843 ಜನರಲ್ಲಿ ಸೋಂಕು ದೃಢಪಟ್ಟಿದೆ. 6466 ಜನರು ಗುಣಮುಖರಾಗಿದ್ದು, ಪ್ರಸ್ತುತ 2198 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 152, ಹರಿಹರ 40, ಜಗಳೂರು 15, ಚನ್ನಗಿರಿ 42, ಹೊನ್ನಾಳಿ
60 ಹಾಗೂ ಹೊರ ಜಿಲ್ಲೆಯ
8 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಾವಣಗೆರೆ ತಾಲ್ಲೂಕಿನ ನಾಗನೂರಿನ 63 ವರ್ಷದ ಪುರುಷ ಹಾಗೂ ದೊಗ್ಗಳ್ಳಿಯ 70 ವರ್ಷದ ಮಹಿಳೆ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.


ಹರಿಹರದಲ್ಲಿ 69 ಜನರಿಗೆ ಸೋಂಕು

ಹರಿಹರ : ನಗರದ ಗಾಂಧಿನಗರ, ಪ್ರಶಾಂತ ನಗರ, ಅಮರಾವತಿ, ಶಿವನಾಗಪ್ಪ ಕಾಂಪೌಂಡ್, ಪೊಲೀಸ್ ಕ್ವಾರ್ಟರ್ಸ್, ಹರ್ಲಾಪುರ, ವಿದ್ಯಾನಗರ ಸೇರಿ 19 ಮತ್ತು ಗ್ರಾಮೀಣ ಪ್ರದೇಶದ ಉಕ್ಕಡಗಾತ್ರಿ 3, ಹಲಸಬಾಳು 2,  ಗುತ್ತೂರು 4, ಮಲೇಬೆನ್ನೂರು 9, ಎಕ್ಕೇಗೊಂದಿ 2, ಎಳೆಹೊಳೆ 10,  ಶಿವನಹಳ್ಳಿ 4,  ಸಂಕ್ಲಿಪುರ 2, ಕೊಕ್ಕನೂರು 3, ಕುಂಬಳೂರು, ಕೆಂಚನಹಳ್ಳಿ, ನಂದಿತಾವರೆ, ದೊಗ್ಗಳ್ಳಿ, ಬೆಳ್ಳೂಡಿ, ನಂದಿಗುಡಿ, ಕೆ.ಎನ್. ಹಳ್ಳಿ, ಹೊಳೆಸಿರಿಗೆರಿ, ಗಂಗನರಸಿ ಗ್ರಾಮಗಳಲ್ಲಿ 1 ಸೇರಿದಂತೆ  ತಾಲ್ಲೂಕಿನಲ್ಲಿ 69 ವ್ಯಕ್ತಿಗಳಿಗೆ ಶನಿವಾರದಂದು ಕೊರೊನಾ ಸೋಂಕು ದೃಡಪಟ್ಟಿದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.


ಮಲೇಬೆನ್ನೂರು ಹೋಬಳಿಯಲ್ಲಿ 31 ಜನರಿಗೆ ಸೋಂಕು

ಮಲೇಬೆನ್ನೂರು : ಹೋಬಳಿಯಲ್ಲಿ ಶನಿವಾರ 31 ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಮಲೇಬೆನ್ನೂರಿನಲ್ಲಿ 10, ಎಳೆಹೊಳೆಯಲ್ಲಿ 10, ಕೊಕ್ಕನೂರಿನಲ್ಲಿ 3, ಜಿಗಳಿಯಲ್ಲಿ 2, ಉಕ್ಕಡಗಾತ್ರಿಯಲ್ಲಿ 2, ಕೆ.ಎನ್. ಹಳ್ಳಿ, ಸಿರಿಗೆರೆ, ನಂದಿತಾವರೆ, ನಂದಿಗುಡಿಯಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಉಪತಹಶೀಲ್ದಾರ್‌ ರವಿ ಮಾಹಿತಿ ನೀಡಿದ್ದಾರೆ. ಜಿಗಳಿಯಲ್ಲಿ ಇಬ್ಬರ ಪೈಕಿ ಒಬ್ಬರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಪಿಡಿಓ ದಾಸರ ರವಿ ತಿಳಿಸಿದ್ದಾರೆ.

error: Content is protected !!