ದಾವಣಗೆರೆ, ಆ. 28- ಜಿಲ್ಲೆಯಲ್ಲಿ ಶುಕ್ರವಾರ 378 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 6 ಜನರು ಸಾವನ್ನಪ್ಪಿದ್ದು, 208 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ 8526 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 179 ಜನರು ಸಾವನ್ನಪ್ಪಿದ್ದಾರೆ. 2111 ಜನರು ಸಕ್ರಿಯ ಪ್ರಕರಣಗಳಿವೆ. ದಾವಣಗೆರೆ ತಾಲ್ಲೂಕಿನಲ್ಲಿ 194, ಹರಿಹರ 34, ಜಗಳೂರು 8, ಚನ್ನಗಿರಿ 79, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯ 20 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ದಾವಣಗೆರೆ ಕುರುಬರ ಕೇರಿ 60 ವರ್ಷದ ಮಹಿಳೆ, ರಿಂಗ ್ರಸ್ತೆಯ 55 ವರ್ಷದ ಪುರುಷ, ಎಂ.ಸಿ.ಸಿ. ಎ ಬ್ಲಾಕ್‌ನ 62ರ ಮಹಿಳೆ, ಮಾಗಾನಹಳ್ಳಿಯ 58ರ ವಹಿಳೆ, ಹರಿಹರದ ಹರಗನಹಳ್ಳಿಯ 48ರ ಪುರುಷ ಹಾಗೂ ಚನ್ನಗಿರಿ ವೆಂಕಟೇಶ್ವರ ಕ್ಯಾಂಪ್‌ನ 45 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಹರಿಹರ ತಾಲ್ಲೂಕಿನಲ್ಲಿ 30 ಪಾಸಿಟಿವ್
ಹರಿಹರ ನಗರದ ಕಾಳಿದಾಸ ನಗರ, ಕೇಶವನಗರ, ಕೆ.ಆರ್. ನಗರ, ಜೆ.ಸಿ. ಬಡಾವಣೆ, ಶಿವಮೊಗ್ಗ ರಸ್ತೆ ಸೇರಿ 11 ಮತ್ತು ಬೆಳ್ಳೂಡಿ, 6, ಮಲೆ ಬೆನ್ನೂರು ಕಮಲಪುರ, ರಾಜನಹಳ್ಳಿ, ಸಾಲಕಟ್ಟೆ, ದೊಗ್ಗಳ್ಳಿ, ಪಾಮೇನಹಳ್ಳಿ, ಮೂಗಿನಗುಂದಿ, ಕೊಂಡಜ್ಜಿ, ಹೊಟೆಗೆನಹಳ್ಳಿ, ಗುತ್ತೂರುಗಳಲ್ಲಿ 1, ಭಾನುವಳ್ಳಿ 4, ಸಾರಥಿ 2, ಗ್ರಾಮಾಂತರದಲ್ಲಿ 19 ಸೇರಿ ತಾಲ್ಲೂಕಿನಲ್ಲಿ 30 ವ್ಯಕ್ತಿಗಳಿಗೆ ಕೊರೊನಾ ದೃಡವಾಗಿರುವುದಾಗಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.
ಎಳೆಹೊಳೆಯಲ್ಲಿ 10 ಪಾಸಿಟಿವ್
ಮಲೇಬೆನ್ನೂರು : ಶುಕ್ರವಾರ ಮಲೇಬೇನ್ನೂರು ಹೋಬಳಿಯಲ್ಲಿ 12 ಕೊರೊನಾ ಪಾಸಿಟಿವ್ ಬಂದಿವೆ. ಕಮಲಾಪುರದಲ್ಲಿ 65 ವರ್ಷದ ವ್ಯಕ್ತಿಗೆ ಮತ್ತು ಮೂಗಿನಗೊಂದಿಯಲ್ಲಿ 52 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ ತಿಳಿಸಿದ್ದಾರೆ.