ಜಿಲ್ಲೆಯಲ್ಲಿ 232 ಪಾಸಿಟಿವ್, 5 ಸಾವು

 

ಜಿಲ್ಲೆಯಲ್ಲಿ 232 ಪಾಸಿಟಿವ್, 5 ಸಾವು - Janathavani

ದಾವಣಗೆರೆ, ಆ. 27- ಜಿಲ್ಲೆಯಲ್ಲಿ ಬುಧವಾರ 232 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 5 ಜನರು ಸಾವನ್ನಪ್ಪಿದ್ದಾರೆ. 162 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ಇಲ್ಲಿಯವರೆಗೆ 7760 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 172 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ 1796 ಸಕ್ರಿಯ ಪ್ರಕರಣಗಳಿವೆ. 

ದಾವಣಗೆರೆ ತಾಲ್ಲೂಕಿನಲ್ಲಿ 103, ಹರಿಹರ 60, ಜಗಳೂರು 4, ಚನ್ನಗಿರಿ 30, ಹೊನ್ನಾಳಿ 26 ಹಾಗೂ ಹೊರ ಜಿಲ್ಲೆಯ 9 ಜನರಲ್ಲಿ ಸೋಂಕು ದೃಢಪಟ್ಟಿದೆ.

ದಾವಣಗೆರೆ ರಾಜೇಂದ್ರ ಬಡಾವಣೆಯ       46 ವರ್ಷದ ಪುರುಷ, ಬಸಾಪುರದ 60ರ ಪುರುಷ, ಹೊನ್ನೂರಿನ 65 ವರ್ಷದ ಮಹಿಳೆ, ಜಗಳೂರಿನ 78 ವರ್ಷದ ವೃದ್ಧೆ ಹಾಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ 55 ವರ್ಷದ ಪುರುಷ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

 

ನಿಟ್ಟೂರು-ಹಾಲಿವಾಣ ಸೇರಿ 67 ಜನರಿಗೆ ಸೋಂಕು

ಮಲೇಬೆನ್ನೂರು, ಆ.26- ಮಲೇಬೆನ್ನೂರು ಹೋಬಳಿಯಲ್ಲಿ ಇಂದು 67 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಿಟ್ಟೂರಿನ ಒಂದೇ ಮನೆಯಲ್ಲಿ 17 ಜನರಿಗೆ ಪಾಸಿಟಿವ್ ಬಂದಿದೆ. ಆದರೆ ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಉಪತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ.

ನಿಟ್ಟೂರಿನಲ್ಲಿ ಒಟ್ಟು 25 ಜನರಿಗೆ, ಹಾಲಿವಾಣದಲ್ಲಿ 13, ವಡೆಯರ ಬಸಾಪುರದಲ್ಲಿ 9, ಮಲೇಬೆನ್ನೂರಿನಲ್ಲಿ 3, ಕುಂಬಳೂರಿನಲ್ಲಿ 4, ಕೊಮಾರನಹಳ್ಳಿ ತಾಂಡಾದಲ್ಲಿ 3, ಸಂಕ್ಲೀಪುರದಲ್ಲಿ 2 ಹಾಗೂ ಕೊಪ್ಪ ಮತ್ತು ಉಕ್ಕಡಗಾತ್ರಿಯಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ರವಿ ಮಾಹಿತಿ ನೀಡಿದ್ದಾರೆ. ಭಾನುವಳ್ಳಿ ಗ್ರಾಮದಲ್ಲೂ ಈ ದಿನ 7 ಜನರಿಗೆ ಪಾಸಿಟಿವ್ ಬಂದಿದೆ.

70 ಜನರಿಗೆ ಟೆಸ್ಟ್: ಇಂದು ಹೊಳೆಸಿರಿಗೆರೆಯಲ್ಲಿ 35 ಜನರಿಗೆ, ಕುಂಬಳೂರಿನಲ್ಲಿ 7, ಕೊಮಾರನಹಳ್ಳಿ 6 ಮತ್ತು ಮಲೇ ಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 32 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಹೊಳೆಸಿರಿಗೆರೆಯಲ್ಲಿ ಇಬ್ಬರಿಗೆ ಹಾಗೂ ಮಲೇಬೆನ್ನೂರಿನಲ್ಲಿ ನಾಲ್ವರಿಗೆ ಪಾಸಿಟಿವ್ ಬಂದಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ತಿಳಿಸಿದ್ದಾರೆ.

error: Content is protected !!