ಎಸ್ಪಿಎಸ್ಸೆಸ್ ಪಿಯು ವಿಜ್ಞಾನ, ವಾಣಿಜ್ಯ ಕಾಲೇಜು ಕಟ್ಟಡ ಉದ್ಘಾಟನೆ

ದಾವಣಗೆರೆ, ಆ. 23- ನಗರದ ಹೊರವಲಯದ ಶಿವಗಂಗೋತ್ರಿ ಆವರಣದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ  ಪ್ರತ್ಯೇಕ ಬಾಪೂಜಿ ವಿದ್ಯಾಸಂಸ್ಥೆಯ ಎಸ್.ಪಿ.ಎಸ್.ಎಸ್. ವಿಜ್ಞಾನ ಮತ್ತು ವಾಣಿಜ್ಯ  ಪದವಿ ಪೂರ್ವ ಕಾಲೇಜಿನ ನೂತನ  ಕಟ್ಟಡದ  ಉದ್ಘಾಟನೆಯನ್ನು  ಸಂಸ್ಥೆಯ ಅಧ್ಯಕ್ಷ ಎಸ್. ಎಸ್. ಗಣೇಶ್ ನೆರವೇರಿಸಿದರು.

ಈ ಸಂದರ್ಭದಲ್ಲಿ  ಅಭಿಜಿತ್ ಶಾಮನೂರು,  ಬಿಐಇಟಿ ಕಾಲೇಜು ನಿರ್ದೇಶಕ  ಡಾ. ವೈ. ವೃಷಭೇಂದ್ರಪ್ಪ, ಶಾಲೆ ಮತ್ತು ಕಾಲೇಜಿನ ಮುಖ್ಯಸ್ಥ ಮಂಜುನಾಥ ರಂಗರಾಜು, ಡಾ.ಚಂದ್ರಶೇಖರ್, ಜಿ.ಬಿ.ಸುರೇಶ್ ಕುಮಾರ್, ಜೆ ಪದ್ಮನಾಭ, ಸಮರೇಂದ್ರ ಪಾಣಿಗ್ರಹಿ, ಪ್ರಾಂಶುಪಾಲ ಜೆ.ಎಸ್.ವನಿತಾ ಇತರರು ಉಪಸ್ಥಿತರಿದ್ದರು. ಇದೇ ವೇಳೆ ಎಸ್.ಎಸ್. ಗಣೇಶ್ ಅವರ ಜನ್ಮ ದಿನವನ್ನೂ ಆಚರಿಸಲಾಯಿತು. 

error: Content is protected !!