ಬಿಪಿ ಔಷಧಗಳಿಂದ ಕೊರೊನಾ ತೀವ್ರತೆ ಕಡಿಮೆ

ಬಿಪಿ ಔಷಧಗಳಿಂದ ಕೊರೊನಾ ತೀವ್ರತೆ ಕಡಿಮೆ - Janathavaniನವದೆಹಲಿ ಆ. 24 – ರಕ್ತದೊತ್ತಡದ ರೋಗಿ ಗಳಿಗೆ ನೀಡಲಾಗುವ ಔಷಧಿಗಳ ಕಾರಣದಿಂದಾಗಿ ಕೊರೊನಾ ತೀವ್ರತೆ ಹಾಗೂ ಸಾವಿನ ಪ್ರಮಾಣ ತಗ್ಗಬಹುದು ಎಂದು  ಅಧ್ಯಯನವೊಂದು ತಿಳಿಸಿದೆ.

ಬ್ರಿಟನ್‌ನ ಈಸ್ಟ್ ಅಂಗೋಲಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯ ನದ ಪ್ರಕಾರ, ಆಂಜಿಯೋಟೆನ್ಸಿನ್ – ಕನ್ವರ್ಟಿಂಗ್ ಎನ್‌ಜೈಮ್ ಇನ್ಹಿಬಿಟರ್ಸ್ (ಎ.ಸಿ.ಇ.ಐ.) ಇಲ್ಲವೇ ಆಂಜಿಯೋಟೆನ್ಷನ್ ರೆಸೆಪ್ಟರ್ ಬ್ಲಾಕರ್ಸ್ (ಎ.ಆರ್.ಬಿ.) ಗಳನ್ನು ರಕ್ತದೊತ್ತಡ ಕಡಿಮೆ ಮಾಡಲು ಬಳಸುವ ರೋಗಿಗಳಲ್ಲಿ ಕೊರೊನಾ ತೀವ್ರತೆ ಕಡಿಮೆ ಇದೆ.

28 ಸಾವಿರದಷ್ಟು ರೋಗಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಹೃದಯ ರೋಗ ಹೊಂದಿರುವವರಿಗೆ ಕೊರೊನಾ ಅಪಾಯ ಹೆಚ್ಚಿದೆ. ಆದರೆ, ಈ ಔಷಧಿಗಳನ್ನು ಸೇವಿಸುತ್ತಿರುವವರಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿ ಕಂಡು ಬಂದಿಲ್ಲ ಎಂದು ತಿಳಿಸಲಾಗಿದೆ. ಕೊರೊನಾ ಸೋಂಕು ಆರಂಭದಲ್ಲಿ ಕಂಡು ಬಂದಾಗ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಎದುರಿಸುವವರಿಗೆ ಅಪಾಯ ಹೆಚ್ಚಾಗಲಿದೆ ಎಂದು ಪರಿಗಣಿಸಲಾಗಿತ್ತು.

error: Content is protected !!