ಮಕ್ಕಳನ್ನು ಶಾಲೆಗಳಿಂದ ದೂರವಿಡುವುದು ಕೊರೊನಾಗಿಂತ ಹಾನಿಕರ : ಬ್ರಿಟನ್ ಪ್ರಧಾನಿ

ಮಕ್ಕಳನ್ನು ಶಾಲೆಗಳಿಂದ ದೂರವಿಡುವುದು ಕೊರೊನಾಗಿಂತ ಹಾನಿಕರ : ಬ್ರಿಟನ್ ಪ್ರಧಾನಿ - Janathavaniಲಂಡನ್, ಆ. 24 – ಮಕ್ಕಳನ್ನು ಶಾಲೆಗಳಿಂದ ಹೆಚ್ಚು ಕಾಲದವರೆಗೆ ದೂರ ಉಳಿಸುವುದು ಕೊರೊನಾ ವೈರಸ್‌ಗಿಂತ ಹೆಚ್ಚು ಹಾನಿಕರ ಎಂದಿರುವ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್, ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರಿಗೆ ಮನವಿ ಮಾಡಿಕೊಂಡಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಬೇಸಿಗೆ ರಜೆಯ ನಂತರ ಶಾಲೆಗಳ ಪುನರಾರಂಭಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸ್ಕಾಟ್‌ಲ್ಯಾಂಡ್  ಹಾಗೂ ಉತ್ತರ ಐರ್‌ಲ್ಯಾಂಡ್‌ಗಳು ಮೊದಲು ಶಾಲೆಗಳನ್ನು ತೆರೆಯಲಿವೆ. ನಂತರದಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ಶಾಲೆಗಳು ಆರಂಭವಾಗಲಿವೆ.

ಕೊರೊನಾ ವೈರಸ್ ಕಾರಣದಿಂದ ಮಕ್ಕಳಿಗೆ ಆಗುವ ಅಪಾಯ ತೀರಾ ಕಡಿಮೆಯಾಗಿದೆ. ಆದರೆ, ಶಾಲೆಗಳಿಂದ ಮಕ್ಕಳು ದೂರವಿದ್ದಷ್ಟೂ ಅವರ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ ಎಂದು ಜಾನ್ಸನ್ ಎಚ್ಚರಿಸಿದ್ದಾರೆ.

ಹಲವಾರು ವೈದ್ಯಕೀಯ ಅಧಿಕಾರಿಗಳು ನೀಡಿರುವ ವರದಿಗಳನ್ನು ಉಲ್ಲಂಘಿಸಿರುವ ಜಾನ್ಸನ್, ಶಾಲೆಗಳಿಂದ ಕೊರೊನಾ ಹರಡುವ ಸಾಧ್ಯತೆ ತೀರಾ ಕಡಿಮೆ ಇದೆ. ಇನ್ನೊಂದೆಡೆ ಮಕ್ಕಳು ಶಾಲೆಗ ಳಿಂದ ದೂರವಿದ್ದರೆ ಅವರ ಆರೋಗ್ಯ ಹಾಗೂ ಸ್ವಾಸ್ಥ್ಯದ ಮೇಲೆ ಪರಿಣಾಮವಾಗುತ್ತದೆ ಮತ್ತು ಅವರ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ಹೀಗಾಗಿ ನಮ್ಮ ಮಕ್ಕಳನ್ನು ಶಾಲೆಗಲಿಗೆ ಕರೆ ತರುವುದು ಪ್ರಮುಖವಾಗಿದೆ. ಅವರು ಶಾಲೆ ಯಲ್ಲಿ ಕಲಿಯಬೇಕಿದೆ ಹಾಗೂ ಸ್ನೇಹಿತರ ಜೊತೆಗೆ ಇರಬೇಕಿದೆ. ಮಕ್ಕಳು ಶಾಲೆಗೆ ಮರಳು ವುದಕ್ಕಿಂತ ಅವರ ಜೀವನದಲ್ಲಿ ಉನ್ನತ ಬೆಳವ ಣಿಗೆ ಮತ್ತೊಂದಿಲ್ಲ ಎಂದವರು ಹೇಳಿದ್ದಾರೆ.

ಮಕ್ಕಳ ಸುರಕ್ಷತೆಗಾಗಿ ಶಾಲೆಗಳನ್ನು ಮತ್ತೆ ತೆರೆಯುವುದು ನಮ್ಮ ನೈತಿಕ ಕರ್ತವ್ಯವಾಗಿದೆ. ಕಳದೆ ಬೇಸಿಗೆಯಲ್ಲಿ ಶಾಲಾ ಸಿಬ್ಬಂದಿ ಶಾಲೆಗಳನ್ನು ಕೊವಿಡ್‌ನಿಂದ ಸುರಕ್ಷಿತಾಗುವಂತೆ ಮಾಡಿದ್ದಾರೆ ಎಂದವರು ತಿಳಿಸಿ ದ್ದಾರೆ. ಕೊರೊನಾ ವೈರಸ್ ಎರಡನೇ ಅಲೆ ಬಂದರೆ ಇಲ್ಲವೇ ಸ್ಥಳೀಯವಾಗಿ ಮತ್ತೆ ಕೊರೊನಾ ಬಂದರೆ ಶಾಲೆಗಳನ್ನು ಕೊನೆಯ ಹಂತದಲ್ಲಿ ಮುಚ್ಚಲಾಗುವುದು ಎಂದು ಜಾನ್ಸನ್ ತಿಳಿಸಿದ್ದರು.

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಮಕ್ಕಳಿಗೆ ಕೊರೊನಾ ವೈರಸ್‌ನಿಂದ ಇರುವ ಅಪಾಯ ತೀರಾ ತೀರಾ ಕಡಿಮೆ ಇದೆ. ಮತ್ತೊಂದೆಡೆ ಅವರು ಶಾಲೆಗಳಿಂದ ಹೊರಗು ಳಿದರೆ ಅವರ ಸಮಗ್ರ ಅಭಿವೃದ್ಧಿಗೆ ಗಂಭೀರ ಅಪಾಯ ಎದುರಾಗುತ್ತದೆ ಎಂದು ಬ್ರಿಟನ್‌ನ ಹಲವಾರು ವೈದ್ಯಕೀಯ ಅಧಿಕಾರಿಗಳು ಹೇಳಿದ್ದರು. ಬಹುತೇಕ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಒಕ್ಕೂಟಗಳು ಶಾಲೆಗಳ ಪುನರಾರಂಭದ ಪರವಾಗಿದ್ದಾರೆ. ಆದರೆ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕುಟುಂಬದವರಲ್ಲಿ ಹಿಂಜರಿಕೆ ಕಂಡು ಬರುತ್ತಿದೆ.

error: Content is protected !!