ಪ್ರಶಾಂತ್ ಭೂಷಣ್ ಹೇಳಿಕೆ ಪರಿಗಣಿಸಲು ಮನವಿ

ದಾವಣಗೆರೆ, ಆ. 24- ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಿ ಸಂವಿಧಾನ ಉಳಿಸಿ ಮತ್ತು ನ್ಯಾಯಾಂಗದ ಪಾರದರ್ಶಕತೆಯನ್ನು ರಕ್ಷಿಸಲು ಬಹಿರಂಗ ಟೀಕೆ ಅಗತ್ಯ ಎಂದು ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲ  ಪ್ರಶಾಂತ್ ಭೂಷಣ್ ನೀಡಿರುವ ಹೇಳಿಕೆಯನ್ನು ಸಮಗ್ರ ನ್ಯಾಯಾಂಗ ಪಾರದರ್ಶಕತೆಯ ತತ್ವದ ಅಡಿಯಲ್ಲಿ ಪರಿಗಣಿಸುವಂತೆ ನಾಗರಿಕ ಹಕ್ಕುಗಳ ರಕ್ಷಣಾ ಸಂಘ ಮನವಿ ಮಾಡಿದೆ.

ಭಾರತದ ಸಂವಿಧಾನದ ಉಳಿವಿಗಾಗಿ ಅಭಿ ವ್ಯಕ್ತಿ ಸ್ವಾತಂತ್ರ್ಯ ಅನಿವಾರ್ಯವಾಗಿದ್ದು, ಪ್ರಜಾ ಪ್ರಭುತ್ವದಲ್ಲಿ ನ್ಯಾಯಾಂಗದ ಪಾರದರ್ಶಕತೆ ರಕ್ಷಿಸಲು ಬಹಿರಂಗ ಟೀಕೆ ಅವಶ್ಯಕ ಹಾಗೂ ಪ್ರಶಾಂತ್ ಭೂಷಣ್ ಅವರ ಬಹಿರಂಗ ಹೇಳಿಕೆ ಯಿಂದ ನ್ಯಾಯಾಂಗದ ಪಾರದರ್ಶಕತೆ ಹೆಚ್ಚಾಗಬ  ಹುದೇ ವಿನಃ ಕಡಿಮೆಯಾಗದು. ಸಂವಿಧಾನದ ಮೌಲ್ಯಗಳನ್ನು ಮತ್ತು ಪ್ರಜಾಪ್ರಭುತ್ವದ ಅನಿಷ್ಟಗಳನ್ನು ಹೋಗಲಾಡಿಸಲು ಪ್ರಶಾಂತ್ ಭೂಷಣ್ ಮುಂದೆ ಬಂದಿದ್ದಾರೆ. ಅವರ ಮೇಲಿನ ಪ್ರಕರಣವನ್ನು ಸಮಗ್ರವಾದ ನ್ಯಾಯಾಂಗ ಶಾಸ್ತ್ರದ ದೃಷ್ಟಿಕೋನಗಳಿಂದ ಪರಿಗಣಿಸಿ ಅವರ ಟೀಕೆಗ ಳನ್ನು ಪರಿಹಾರಿಕ ವಿಧಾನಗಳಲ್ಲಿ ಪರಿಗಣಿಸಿ ನ್ಯಾಯ ನೀಡುವಂತೆ ಸಂಘದಿಂದ ಒತ್ತಾಯಿಸಲಾಯಿತು.

ಜಿಲ್ಲಾ ನ್ಯಾಯಾಧೀಶರಾದ ಕೆ.ಬಿ. ಗೀತ ಅವರಿಗೆ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ಸಾಬಪ್ಪ, ಹಿರಿಯ ಮುಖ್ಯ ಸಿವಿಲ್ ನ್ಯಾಯಾಧೀಶರಾದ ಇ.ಚಂದ್ರಕಲಾ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಮಂಜುನಾಥ, ನಾಗರಿಕ ಹಕ್ಕುಗಳ ರಕ್ಷಣಾ ಸಂಘದ ಕೆ.ಸೈಯದ್ ಖಾದರ್, ಎನ್.ಎಂ. ಆಂಜನೇಯ, ಕೆ.ಎನ್. ನಾರಪ್ಪ, ಪ್ರದೀಪ್ ಹಾಗೂ ಇತರರು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದರು.

error: Content is protected !!