ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಸರ್ಕಾರ

ಹರಪನಹಳ್ಳಿ : ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಿಡಿಕಾರಿದ ಎಂ.ಪಿ. ಲತಾ ಮಲ್ಲಿಕಾರ್ಜುನ್ 

ಹರಪನಹಳ್ಳಿ, ಆ.21- ರಾಜ್ಯ ಸರ್ಕಾರ ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಭೂ ಸುಧಾರಣಾ ಕಾಯ್ದೆ, ಎ ಪಿಎಂಸಿ ಕಾಯ್ದೆ, ಧಾರ್ಮಿಕ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಗಳನ್ನು ಜಾರಿಗೆ ತರಲು ಹೊರಟಿರುವುದು ವಿಷಾದದ ಸಂಗತಿ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್  ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಿನ್ನೆ ಆಯೋಜಿ ಸಿದ್ದ ಜನಧ್ವನಿ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ಮರಣ ಶಾಸನ ಬರೆದಂತಾಗಿದೆ. ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ವಾಪಸ್ಸು ಪಡೆಯಬೇಕು ಹಾಗೂ ಭೂಮಿ ತಿದ್ದುಪಡಿ ಕಾಯ್ದೆಯಿಂದ  ಶ್ರೀಮಂತರಿಗೆ ಹೆಚ್ಚು ಅವಕಾಶ ಸಿಕ್ಕಂತಾಗುತ್ತದೆ. ಸರ್ಕಾರ ಉಳುವ ವನೇ ಒಡೆಯ ಎನ್ನುವ ತನ್ನ ಧೋರಣೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಹತ್ತನೇ  ತರಗತಿ ಓದುತ್ತಿರುವ 7ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಫೋನ್‌ಗಳನ್ನು ವಿತರಿಸಲಾಯಿತು. 

ಎಪಿಎಂಸಿ ಅಧ್ಯಕ್ಷ ಅಶೋಕಗೌಡ, ತಾ.ಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ಓ.ರಾಮಪ್ಪ, ತಾ.ಪಂ ಮಾಜಿ ಅಧ್ಯಕ್ಷ  ಕಿತ್ತೂರು ಓಬಣ್ಣ,  ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷೆ ಪುಷ್ಪ ದಿವಾಕರ್, ಹಲುವಾಗಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರತ್ನಮ್ಮ, ಮತ್ತಿಹಳ್ಳಿ  ರಾಮಪ್ಪ,  ವಕೀಲ ಹಲಗೇರಿ ಮಂಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ  ಕಾನಹಳ್ಳಿ ರುದ್ರಪ್ಪ, ಮತ್ತೂರು ಬಸವರಾಜ, ಉದಯಶಂಕರ,  ಸುರೇಶ್, ಪುಷ್ಪ ದಿವಾಕರ, ಕಂಚಿಕೇರಿ ಜಯ ಲಕ್ಷ್ಮಿ, ಗುಂಡಗತ್ತಿ ನೇತ್ರಾವತಿ, ಕವಿತಾ ಸುರೇಶ್, ಬಾಷಾ ಮುಜಾವರ, ಕಲ್ಲಹಳ್ಳಿ ಗೋಣೆಪ್ಪ, ಹುಲಿಕಟ್ಟಿ ಕೃಷ್ಣಪ್ಪ, ಅಗ್ರಹಾರ ಅಶೋಕ,  ಕುಂ ಚೂರು ಇಬ್ರಾಹಿಂ, ಉಮಾಶಂಕರ್. ಕವಿತಾ ಸುರೇಶ್‌, ಎನ್. ಮಜೀದ್ ಇನ್ನಿತರರಿದ್ದರು.

error: Content is protected !!