ಚಂದ್ರನಹಳ್ಳಿಯಲ್ಲಿ ಭತ್ತದ ಸಮಗ್ರ ಬೆಳೆ ನಿರ್ವಹಣೆ ತರಬೇತಿ

ದಾವಣಗೆರೆ,ಆ.19- ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ  ಇವರ ಸಂಯುಕ್ತಾಶ್ರಯದಲ್ಲಿ ಚಂದ್ರನಹಳ್ಳಿ ಗ್ರಾಮದಲ್ಲಿ ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ತರಬೇತಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಭತ್ತದಲ್ಲಿ ಯಾಂತ್ರಿಕೃತ ನಾಟಿ ಮಾಡಿದ ರೈತರ ತಾಕುಗಳಿಗೆ ಭೇಟಿ ನೀಡಿ, ಭತ್ತದಲ್ಲಿ ಬರುವ ಕಾಂಡ ಕೊರಕ ಕೀಟದ ಬಾಧೆಯನ್ನು ತಡೆಯಲು ಸಮಗ್ರ ಪೀಡೆ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು ಹಾಗೂ ಒಂದು ಎಕರೆಗೆ 4 ಮೋಕ ಬಲೆಗಳನ್ನು ಅಳವಡಿಸುವುದರಿಂದ ಕೀಟನಾಶಕದ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ತಿಳಿಸಿದರು. 

ಎಚ್ ಎಂ ಸಣ್ಣ ಗೌಡರು ಭತ್ತದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣಾ ಕ್ರಮಗಳನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಯಾಂತ್ರೀಕೃತ ನಾಟಿ ಮಾಡಿದ ಆಯ್ದ 20 ರೈತರಿಗೆ ಮೋಹಕ ಬಲೆಗಳನ್ನು ಮುಂಚೂಣಿ ಪ್ರಾತ್ಯಕ್ಷಿಕೆಯ ಅಂಗವಾಗಿ ನೀಡಲಾಯಿತು. ಮೋಕ ಬಲೆಗಳನ್ನು ಅಳವಡಿಸುವ ವಿಧಾನವನ್ನು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಕೊಡಲಾಯಿತು. 

ಕಾರ್ಯಕ್ರಮದಲ್ಲಿ ವಿಜಯಕುಮಾರ್, ಪ್ರಗತಿಪರ ರೈತರಾದ ಚಂದ್ರಕಾಂತ,  ಗುರುಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!